ಮಿತ್ರಾವಳಿ

Author : ಜಿ.ಎನ್. ಉಪಾಧ್ಯ

Pages 180

₹ 150.00




Published by: ಕನ್ನಡ ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ, ಮುಂಬೈ
Address: ಮುಂಬೈ
Phone: 2430 8316

Synopsys

ಕಳೆದ ನಾಲ್ಕು ದಶಕಗಳಿಂದ ಕತೆ, ಕಾದಂಬರಿ ಕ್ಷೇತ್ರದಲ್ಲಿ ಗುರುತಿಸುತ್ತಾ ಬಂದವರು ಮಿತ್ರ ವೆಂಕಟ್ರಾಜ್. ಆರಂಭದಲ್ಲಿ ಕತೆಗಳ ಮೂಲಕ ಗಮನ ಸೆಳೆದ ಇವರು ಇದೀಗ ಮಿತ್ರಾ ವೆಂಕಟ್ರಾಜ್ ಅವರ ಸಮಗ್ರ ಸಾಹಿತ್ಯ ದರ್ಶನವನ್ನು ಮಾಡುವ ಪ್ರಯತ್ನಕ್ಕಿಳಿದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ, ಮುಂಬೈ, ಡಾ. ಜಿ. ಎನ್. ಉಪಾಧ್ಯ ಅವರು 'ಮಿತ್ರಾವಳಿ'ಯ ಬರಹಗಳ ಬಗೆಗೆ ಮಂಡಿಸಿದ ಬೇರೆ ಬೇರೆ ಅಭಿಪ್ರಾಯ, ವಿಮರ್ಶೆಗಳನ್ನು ಒಂದೆಡೆಗೆ ತಂದಿದ್ದಾರೆ. ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಪ್ರೊ. ಟಿ.ಪಿ. ಅಶೋಕ, ಪ್ರೊ. ಮಾಧವ ಕುಲಕರ್ಣಿ, ರಾಮಚಂದ್ರ ದೇವ, ಡಾ. ಜಿ. ಎಸ್. ಅಮೂರ, ಗಿರಡ್ಡಿ ಗೋವಿಂದರಾಜ, ವ್ಯಾಸರಾವ್ ನಿಂಜೂರ್, ತುಳಸಿ ವೇಣುಗೋಪಾಲ್, ಮುರಳೀಧರ ಉಪಾಧ್ಯ ಹಿರಿಯಡ್ಕ, ಡಾ. ನಾ. ಮೊಗಸಾಲೆ, ಸುನೀತಾ ಎಂ. ಶೆಟ್ಟಿ ಮೊದಲಾದವರು ಮಿತ್ರಾ ಅವರ ಸಾಹಿತ್ಯವನ್ನು ಬೇರೆ ಬೇರೆ ನೆಲೆಗಳಲ್ಲಿ ವಿಶ್ಲೇಶಿಸಿದ್ದಾರೆ. ಅಂತಹ ಸುಮಾರು 50ಕ್ಕೂ ಹೆಚ್ಚು ಬರಹಗಳು ಈ ಕೃತಿಯಲ್ಲಿವೆ.

About the Author

ಜಿ.ಎನ್. ಉಪಾಧ್ಯ
(07 February 1967)

ಜಿ.ಎನ್. ಉಪಾಧ್ಯ ಮೂಲತಃ ಉಡುಪಿ ತಾಲೂಕಿನ ಕೋಟದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್‍ಯಾಂಕ್ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ  ಪದವಿ ಪಡೆದಿದ್ದಾರೆ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. 'ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಅವರು ಕೆಲವು ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ...

READ MORE

Related Books