‘ಒಡನಾಡಿ’ ಈ ಪುಸ್ತಕವು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮುಸಕಲೋಟಿ ಗ್ರಾಮದ ಎಚ್. ಕೆಂಚಮಾರಯ್ಯ ಅವರ ವ್ಯಕ್ತಿತ್ವ, ಬದುಕು ಕುರಿತ ಅಭಿನಂದನಾ ಗ್ರಂಥ. ಡಾ. ಓ. ನಾಗರಾಜು ಕೃತಿಯ ಪ್ರಧಾನ ಸಂಪಾದಕರು ಹಾಗೂ ಡಾ. ನಾಗಭೂಷಣ ಬಗ್ಗನಡು ಸಂಪಾದಕರು.
ಕೆಂಚ ಮಾರಯ್ಯನವರು ಉತ್ತಮ ಶಿಕ್ಷಕರು, ಸಂಘಟಕರು, ಸೇವಾಕಾರ್ಯಕರ್ತರು, ರೈತ ಹಾಗೂ ಮಹಿಳಾ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಈ ಪುಸ್ತಕದ ‘ನುಡಿ ತೋರಣ’ ಎಂಬ ಮೊದಲ ಭಾಗದಲ್ಲಿ ಕೆಂಚಮಾರಯ್ಯನವರ ಜನನ, ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ, ದಲಿತ ಚಳವಳಿ, ಸಾಮಾಜಿಕ ಸೇವೆಗಳ ಕುರಿತ ಲೇಖನಗಳಿವೆ. ಎರಡನೆಯ ಭಾಗದಲ್ಲಿ (ಕುಲ ಸಂಕಥನಗಳು) ಎಂಬ ಸ್ವಾತಂತ್ಯ್ರ ಹೋರಾಟದಲ್ಲಿ ದಲಿತರ ಕಾಣಿಕೆ, ಮತಂಗ ಮುನಿಯು ಕಾಲ ದೇಶಗಳ ನಿರ್ದಿಷ್ಟ ವ್ಯಕ್ತಿ, ತುಮಕೂರು ಜಿಲ್ಲೆಯ ದಲಿತರು, ಉದ್ಯಮ ಮತ್ತು ದಲಿತರು, ಮೀಸಲಾತಿ ಹಾಗೂ ಒಳಮೀಸಲಾತಿ, ದಲಿತ ಮಹಿಳೆಯರ ಸಾಂಸ್ಕೃತಿಕ ಆಯಾಮಗಳಿರುವ ಬರಹಗಳನ್ನು ಈ ಕೃತಿ ಒಳಗೊಂಡಿದೆ.
©2025 Book Brahma Private Limited.