ಸುಗ್ಗಿಯ ಸೊಬಗು

Author : ಬಿ.ಜಿ. ಸತ್ಯಮೂರ್ತಿ

Pages 556

₹ 600.00




Year of Publication: 2011
Published by: ಸಾಹಿತ್ಯ ಸುಗ್ಗಿ ಪ್ರಕಾಶನ
Address: # 40, 1ನೇ ಮುಖ್ಯರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು-560072

Synopsys

ಲೇಖಕ ಹಾಗೂ ಸಾಹಿತಿ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಕಥೆ, ಕಾದಂಬರಿ ಸೇರಿದಂತೆ ಲೇಖನಗಳ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಿತರು. ಅವರಿಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ಅವರ ಬದುಕು-ಬರಹ ಕುರಿತು ಸಂಗ್ರಹಿಸಿದ ಹಾಗೂ ಈ ಮೂಲಕ ಅಭಿನಂದಿಸಿದ `ಸುಗ್ಗಿಯ ಸೊಬಗು’ ಶೀರ್ಷಿಕೆಯ ಗ್ರಂಥವಿದು.

ಲೇಖಕ ಬಿ.ಜಿ. ಸತ್ಯಮೂರ್ತಿ ಅವರು ಕೃತಿಯ ಸಂಪಾದಕರು. ಕುತೂಹಲ, ಹಂಬಲಗಳನ್ನು ಜೀವನ ಪ್ರೀತಿಯಾಗಿ ಸ್ವೀಕರಿಸಿ ಎಲ್ಲರೊಂದಿಗೂ ಮಾನವೀಯ ನಡೆಯೊಂದಿಗೆ ಬದುಕುವ ಹಾಗೂ ಆ ಮೂಲಕ ಬದುಕಿನ ಸಾರ್ಥಕತೆ ಕಂಡುಕೊಂಡ ನಿಡಸಾಲೆ ಪುಟ್ಟಸ್ವಾಮಯ್ಯ ಅವರದ್ದು ಮಾದರಿ ವ್ಯಕ್ತಿತ್ವ. 500 ಕ್ಕೂ ಆಧಿಕ ಕೃತಿಗಳನ್ನು ಪ್ರಕಟಿಸಿ ಲೇಖಕರನ್ನು ಪ್ರೋತ್ಸಾಹಿಸಿದ ಕೀರ್ತಿ ಇವರದ್ದು. ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಆಧ್ಯಕ್ಷರಾಗಿಯೂ ಗಣನೀಯ ಸೇವೆ ಸಲ್ಲಿಸಿದ್ದು, ಲೇಖಕರಿಗೆ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಲೇಖಕರನ್ನು ಪ್ರೇರೇಪಿಸಿದ್ದಾರೆ. ಇವರ ಸಾಹಿತ್ಯಕ ಸಾಧನೆ-ಬದುಕಿನ ರೀತಿ-ವಿಧಾನಗಳನ್ನು ಇಲ್ಲಿಯ ಲೇಖನಗಳಲ್ಲಿ ಕಾಣುತ್ತೇವೆ.

About the Author

ಬಿ.ಜಿ. ಸತ್ಯಮೂರ್ತಿ
(10 September 1937)

ಕೋಲಾರ ಜಿಲ್ಲೆಯ ಚಿಂತಾಮಣಿಯವರು. (ಜನನ: 10-09-1937 )ತಂದೆ ಬಿ.ಕೆ. ಗುರುರಾವ್‌, ತಾಯಿ ಕೃಷ್ಣವೇಣಿ ಬಾಯಿ. ಚಿನ್ನದಗಣಿಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ,  ಮಾಧ್ಯಮಿಕ ಶಾಲೆ ವೇಮಗಲ್‌, ಮತ್ತು ಕೋಲಾರದಲ್ಲಿ ಪ್ರೌಢಶಾಲೆಯ ನಂತರ ಮೈಸೂರು ಮುಕ್ತವಿಶ್ವವಿದ್ಯಾಲಯದಿಂದ ಎಂ.ಎ. (ಜಾನಪದ ಐಚ್ಛಿಕ) ಪದವಿ. ಕುಂದಾಪುರದಲ್ಲಿ ಕೃಷಿ ಇಲಾಖೆಯಲ್ಲಿ ಉದ್ಯೋಗ. ಸದ್ಯ ನಿವೃತ್ತಿ. ಇವರ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಹಲವಾರು ತೆಲುಗು ಕತೆಗಳನ್ನೂ ಅನುವಾದಿಸಿದ್ದಾರೆ. ಕಥೆಗಳು ಆಕಾಶವಾಣಿ, ದೂರದರ್ಶನ ಜಾಲಗಳಲ್ಲಿಯೂ ಪ್ರಸಾರವಾಗಿವೆ.ಮಯೂರ ಪ್ರಕಾಶನ ಆರಂಬಿಸಿದ್ದು, ನಂತರ ನಂತರ ಸಮಾನ ಮನಸ್ಕರೊಡನೆ ಕಲಾಮಯೂರಿ ಪ್ರಕಾಶನ ನಡೆಸಿದರು. ಪ್ರೇಮದ ಬಾಳು, ಒಲವಿನ ಒಸರು, ಹೃದಯವೀಣೆ, ದೇವರಿಲ್ಲದ ಗುಡಿ, ವಸಂತ ...

READ MORE

Related Books