ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರ ಅಭಿನಂದನಾ ಗ್ರಂಥ ಇದು. ಡಾ. ಗುರುಲಿಂಗಪ್ಪಾ ಧಬಾಲೆ ಕೃತಿಯನ್ನು ಸಂಪಾದಿಸಿದ್ದು ಇದರ ಪ್ರಧಾನ ಸಂಪಾದಕರು ಡಾ. ಎಂ.ಎಂ. ಕಲಬುರ್ಗಿ.
“ಉಪೇಕ್ಷಿತ ಜ್ಞಾನಕ್ಷೇತ್ರವನ್ನು ಬೆಳಕಿಗೆ ತರಬೇಕೆಂಬ ಉದ್ದೇಶದಿಂದ ....ಆರಂಭದಲ್ಲಿ ಶ್ರೀ ಮಠದ-ಶ್ರೀಗಳ ಸಾಧನೆ ಅಂತ್ಯದಲ್ಲಿ ಈ ಸಾಧನೆಗಳ ಸಮಗ್ರವಿವರ, ಮಧ್ಯದಲ್ಲಿ ಕಲ್ಯಾಣ ಕರ್ನಾಟಕದ ತತ್ವಕಾರರು ವಿಷಯ ಕುರಿತ ಅಭ್ಯಾಸಪೂರ್ಣ ಪ್ರಭಂಧಗಳನ್ನು ಸಂಯೋಜಿಸಲಾಗಿದೆ....ಈ ಸಾಹಿತ್ಯಪ್ರಕಾರದ ಬಿಡಿಯಾದ ಅಧ್ಯಯನ ಈವರೆಗೆ ಜರುಗಿದ್ದರೂ ಒಂದು ಸಮಗ್ರ ಅಧ್ಯಯನದ ಕೊರತೆ...ಉಳಿದುಕೊಂಡಿದ್ದಿತು. ಇದನ್ನು ಪೂರೈಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕದ ತತ್ವಪದಕಾರರು ಎಂಬ ವಿಷಯಕ್ಕೆ ಈ ಅಭಿನಂದನ ಗ್ರಂಥದಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆ” ಎಂದು ಕಲಬುರ್ಗಿ ಹೇಳಿದ್ದಾರೆ.
ಅರವತ್ತು ಜನ ವಿದ್ವಾಂಸರು ವಿವಿಧ ವಿಷಯಗಳನ್ನು ಕೃತಿಯಲ್ಲಿ ಮಂಡಿಸಿದ್ದಾರೆ.
©2024 Book Brahma Private Limited.