ಸಹೃದಯ

Author : ದೇಜಗೌ (ದೇ. ಜವರೇಗೌಡ)

Pages 408

₹ 400.00




Year of Publication: 2004
Published by: ವನಶ್ರೀ ಪ್ರಕಾಶನ
Address: ಶಾಂತವೇರಿ ಗೋಪಾಲಗೌಡ ಸ್ಮಾರಕ ಆಸ್ಪತ್ರೆಯ ಆವರಣ, ಮಲೆ ಮಹದೇಶ್ವರ ರಸ್ತೆ, ಮೈಸೂರು-10

Synopsys

ಹಿರಿಯ ಕವಿ-ಅನುವಾದಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು 60 ತುಂಬಿದ ಸಂದರ್ಭದಲ್ಲಿ ಸ್ನೇಹಿತರು ಮತ್ತು ಅಭಿಮಾನಿಗಳು ಸೇರಿ ಸಲ್ಲಿಸಿದ ಅಭಿನಂದನ ಗ್ರಂಥ. ಕನ್ನಡ ಸಾಹಿತ್ಯಕ ವಲಯದಲ್ಲಿ ಸುಳಿದಾಡುವ ಆಪ್ತ ಹೆಸರು ಸಿದ್ದಲಿಂಗ ಪಟ್ಟಣಶೆಟ್ಟಿ. ಕಟ್ಟುವ ಕಾಯಕದಲ್ಲಿ ಅವರದು ಅವಿರತ ದುಡಿಮೆ. ಕನ್ನಡ ಕಾವ್ಯ, ಸಾಹಿತ್ಯ, ರಂಗಭೂಮಿಗೆ ಸಿ.ಪ. ಅವರ ಕೊಡುಗೆ ಅಪಾರ, ಅನನ್ಯ.

ಸಂಕೋಚ, ಸಂಭಾವಿತತನ ಮತ್ತು ಸ್ನೇಹಪ್ರಿಯತೆಯಿಂದಾಗಿ ಎಲ್ಲರ ಅಚ್ಚುಮೆಚ್ಚು. ನಾಡಿನ ಹಲವು ಪ್ರಶಸ್ತಿ ಪುರಸ್ಕಾರ ಗೌರವವನ್ನು ತಮ್ಮದಾಗಿಸಿಕೊಂಡವರು. ಕನ್ನಡ-ಹಿಂದೀ ಸಾಹಿತ್ಯದ ಚಿನ್ನದ ಕೊಂಡಿಯಾಗಿ ನಾಡು ನುಡಿಯ ಭಾವೈಕ್ಯತೆಗೆ ಹೊಸ ಆಯಾಮ, ತಿರುವುಗಳನ್ನು ನೀಡಿದವರು. ಸಾಹಿತ್ಯದ ಕೊಡು ಕೊಳ್ಳುವಿಕೆಯಲ್ಲಿ ಪಟ್ಟಣಶೆಟ್ಟರು ಅಗ್ರಗಣ್ಯರು.

 ಸಿ.ಪ.  ಅವರು ತಮ್ಮ ತಾರುಣ್ಯದ : ಸಾಹಸ ಪ್ರವೃತ್ತಿಯನ್ನು ಸದಾ ಕಾಪಾಡಿಕೊಂಡವರು. ಈ 'ಸಹೃದಯ' ಶತಾಯುಷಿಯಾಗಲೆಂಬುದು ಕನ್ನಡಿಗರ ಆಶಯ. ಸಿ.ಪ. ಅವರ ಸಮಗ್ರ ವ್ಯಕ್ತಿತ್ವವನ್ನು ಪರಿಚಯಿಸುವ ಗ್ರಂಥವಿದಾಗಿದೆ. ಅವರ ಸಂಪನ್ನ ಬದುಕಿನ ಪ್ರತೀಕವೂ ಆಗಿದೆ.

About the Author

ದೇಜಗೌ (ದೇ. ಜವರೇಗೌಡ)
(06 July 1918 - 30 April 2016)

ದೇಜಗೌ ಎಂದು ಚಿರಪರಿಚಿತರಾಗಿದ್ದ ದೇವೇಗೌಡ ಜವರೇಗೌಡ ಕೃಷಿಕ ಕುಟುಂಬದಿಂದ ಬಂದವರು. ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ 1918ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡ- ತಾಯಿ ಚೆನ್ನಮ್ಮ. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ಎಂ.ಎ. ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1944) ಕೆಲಸಕ್ಕೆ ಸೇರಿದ ಅವರು ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾಗಿ ನಿವೃತ್ತರಾದರು. ಕುವೆಂಪು ವಿದ್ಯಾವರ್ಧಕ ...

READ MORE

Related Books