ಲೇಖಕಿ ಪಿ. ಚಂದ್ರಿಕಾ ಅವರು ಸಾಹಿತಿ ದೇವನೂರು ಮಹದೇವರ ಸಾಹಿತ್ಯ ಅಧ್ಯಯನ ಮಾಡಲು, ಮತ್ತು ಅವರ ಬಗೆಗೆ ಬಂದ ಲೇಖನ ಬರಹಗಳನ್ನು ಸಂಪಾದಿಸಿ ಪ್ರಕಟಿಸಿ ಹೊರತಂದಿರುವ ಕೃತಿ ’ಯಾರ ಜಪ್ತಿಗೂ ಸಿಗದ ನವಿಲುಗಳು’.
ಈ ಕೃತಿಯಲ್ಲಿ ದೇವನೂರು ಮಹಾದೇವ ಅವರ ಸಾಹಿತ್ಯ ಕೃತಿಗಳ ಕುರಿತು ಬೇರೆ ಬೇರೆ ಬರಹಗಾರರು ಹಂಚಿಕೊಂಡ ಬರಹಗಳಿವೆ.
ನಮ್ಮ ನಡುವಿನ ಅನೇಕ ಸ್ಥಿತ್ಯಂತರ, ತಲ್ಲಣ, ಅಸಹಾಯಕತೆ, ನೋವು ಮತ್ತು ಅದರೊಟ್ಟಿಗೇ ಇರುವ ಬದುಕಿನ ಜೀವಂತ ಸೆಲೆಗಳನ್ನು ಕಟ್ಟಿಕೊಡಲು ಸಾಧ್ಯವಾಗುವ ದೇವನೂರ ಮಹಾದೇವರ ಸಾಹಿತ್ಯ ಸೃಷ್ಟಿಯನ್ನು ಅನೇಕರ ಬರಹಗಳಲ್ಲಿ, ವಿಚಾರಧಾರೆಗಳಲ್ಲಿ, ಅನಿಸಿಕೆ ,ಅಭಿಪ್ರಾಯಗಳಲ್ಲಿ ಲೇಖಕಿ ಪ್ರಕಟಿಸಿ ಓದುಗರಿಗೆ ನೀಡಿದ್ದಾರೆ.
©2025 Book Brahma Private Limited.