ಮಕ್ಕಳ ಸಾಹಿತ್ಯ ರಚನೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪರಂಪರೆಯನ್ನು ಮುಂದುವರೆಸಿ ಜನಪ್ರಿಯರಾದವರಲ್ಲಿ ಚನ್ನಬಸಪ್ಪ ಹೊಸಮನಿ ಪ್ರಮುಖರು. ಮಕ್ಕಳ ಸಾಹಿತ್ಯ ಸಂಘಟನೆ, ಪ್ರಚಾರ, ಪ್ರಸಾರದಲ್ಲಿಯೂ ಗಣನೀಯ ಸೇವೆ ಸಲ್ಲಿರುವ ಹೊಸಮನಿ ಅವರ ಕುರಿತು ಬರೆದಿರುವ ಅಭಿನಂದನಾ ಗ್ರಂಥ `ಸತ್ಯಾರ್ಥಿ'. ಈ ಕೃತಿಯನ್ನು ಸಿ.ಕೆ. ನಾವಲಗಿ ಅವರು ಸಂಪಾದಿಸಿದ್ದಾರೆ. ಹೊಸಮನಿ ಅವರ ಬದುಕು-ಬರಹ ಸಾಧನೆಗಳ ಕುರಿತು ವಿವಿಧ ಲೇಖಕರು, ಬಳಗದವರು ಲೇಖನಗಳನ್ನು ಬರೆದಿದ್ದಾರೆ. ಮಕ್ಕಳ ಅಕ್ಕರೆಯ ಕವಿಗೆ ಅಭಿನಂದನೆ, ಸಂಪಾದಕೀಯ, ಸತ್ಯಾರ್ಥಿ ಶಿಕ್ಷಣದ ಮರುಹುಟ್ಟಿಗ ಬೀಜವಾದವರು, ತಿರುಳ್ಗನ್ನಡ ಕರುಳ ಬಳ್ಳಿ, ಅದಮ್ಯ ಶಿಕ್ಷಕ ಸಾಹಿತಿ, ಮಕ್ಕಳ ಸಾಹಿತ್ಯದ ಪ್ರೇರಕ ಶಕ್ತಿ, ಮಕ್ಕಳ ಸಾಹಿತಿ ಸತ್ಯಾರ್ಥಿ, ಸಾರ್ಥಕ ಬದುಕಿನ ಸತ್ಯಾರ್ಥಿ, ಸತ್ಯಾರ್ಥಿ: ಶಿಶುಪರ ಚಿಂತನೆಗಳು, ಸತ್ಯಾರ್ಥಿ, ನಿಸ್ಸೀಮ, ಸತ್ಯನಿಷ್ಠ ಸತ್ಯಾರ್ಥಿ, ಸತ್ಯಾರ್ಥಿ, ಶಿಶು ಸಾಹಿತ್ಯ ಶಿರೋಮಣಿ, ಚಿಣ್ಣರ ಅಣ್ಣ ಸತ್ಯಾರ್ಥಿ, ಸತ್ಯಾರ್ಥಿಯ ಸಂಚಲನ, ಚಿಣ್ಣರಶ್ರೀ ಚೆನ್ನಬಸಪ್ಪ, ಸತ್ಯಾರ್ಥಿ ಸುತ್ತಮುತ್ತ, ಸತ್ಯಾರ್ಥಿ: ತಿರುಳ್ಗನ್ನಡ ಕಂದ, ಸತ್ಯಾರ್ಥಿ: ಮಕ್ಕಳ ಸಾಹಿತ್ಯದ ಪ್ರತಿಪಾದಕ ಅಧ್ಯಾಯಗಳ ಮೂಲಕ ಹಿರಿಯ ಚನ್ನಬಸಪ್ಪ ಹೊಸಮನಿ ಅವರನ್ನು ಅಭಿನಂದಿಸಲಾಗಿದೆ.
©2025 Book Brahma Private Limited.