ಅನುಪಮ ಅಭಿನಂದನ ಎಂಬ ಪುಸ್ತಕವು ಲೇಖಕಿ ಅನುಪಮಾ ನಿರಂಜನ ಅವರ ಅಭಿನಂದನಾ ಗ್ರಂಥವಾಗಿದೆ. ಬೋಳಂತಕೋಡಿ ಈಶ್ವರ ಭಟ್ಟ ಅವರ ಸಂಪಾದಕತ್ವದಲ್ಲಿ ಬಂದಿರುವ ಕೃತಿ ಇದು. ಡಾ. ಅನುಪಮಾ ನಿರಂಜನ ಅವರು ಕನ್ನಡದ ಮೊದಲ ಪಂಕ್ತಿಯ ಲೇಖಕಿಯರಲ್ಲಿ ಒಬ್ಬರು. ವಿಮರ್ಶಕರ ಅವಜ್ಞೆಗೆ ತುತ್ತಾಗಿದ್ದರೂ, ಅವರ "ಘೋಷ" ಮತ್ತು “ಮಾಧವಿ" ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದ ಕೃತಿಗಳು. ಆತ್ಮವೃತ್ತ “ನೆನಪು: ಸಿಹಿ - ಕಹಿ" ಒಂದು ವಿಶಿಷ್ಟ ಆತ್ಮಕಥನ. ಅವರ ವಿಜ್ಞಾನ ಸಾಹಿತ್ಯ ಕನ್ನಡಕ್ಕೆ ಅಮೂಲ್ಯ ಕೊಡುಗೆ. ಈ ಕೃತಿಗೆ ವಿ.ಬಿ.ಮೊಳೆಯಾರ ಮತ್ತು ವಿ.ಬಿ. ಅರ್ತಿಕಜೆಯವರು ಸಹ ಸಂಪದಾಕರಾಗಿದ್ದಾರೆ.
©2025 Book Brahma Private Limited.