‘ಸತ್ಯಾಗ್ರಹಿ’ ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರ ಅಭಿನಂದನಾ ಗ್ರಂಥವಾಗಿದ್ದು, ಸದಾನಂದ ಎನ್. ಪಾಟೀಲ್ ಅವರ ಸಂಪಾದಕತ್ವದ ಕೃತಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ವಿಚಾರಗಳು ಹೀಗಿವೆ; ಹೋರಾಟದ ಗುಣಗಳನ್ನು ರಕ್ತಗತವಾಗಿ ಪಡೆದುಕೊಂಡು ಬಂದಿರುವ ಶ್ರೀ ಕೇದಾರಲಿಂಗಯ್ಯನವರು ನಾಲ್ಕು ದಶಕಗಳಕಾಲ ಜೇವರ್ಗಿ ತಾಲೂಕಿನ ರೈತರಿಗಾಗಿ, ಬಡವರಿಗಾಗಿ ಪಟ್ಟ ಶ್ರಮ, ಇಟ್ಟ ಹೆಜ್ಜೆ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ. ಗ್ರಾಮ ಸುಧಾರಣಾ ಸಂಘದಿಂದ ಮೊದಲ್ಗೊಂಡು ತೊಗರಿ ಬೋರ್ಡ್, ಮಲ್ಲಾಬಾದ್ ಏತ ನೀರಾವರಿ, ಕೋನಾ ಹಿಪ್ಪರಗಾ ಬ್ರಿಜ್, ದೇಶದಲ್ಲಿಯೇ ಅತಿ ಹೆಚ್ಚು ಬೆಳೆ ಪರಿಹಾರ ಒದಗಿಸಿದಂತಹ ಐತಿಹಾಸಿಕ ಯೋಜನೆಗಳ ಯಶಸ್ಸಿಗೆ ಅವರು ನಡೆಸಿದ ಹೋರಾಟಗಳನ್ನು ಇಲ್ಲಿನ ಜನತೆ ಯಾವತ್ತು ಮರೆಯಲು ಸಾಧ್ಯವಿಲ್ಲ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.
©2025 Book Brahma Private Limited.