ಹಿರಿಯ ಸಾಹಿತ್ಯಾಸಕ್ತ, ಉದ್ಯಮಿ ವೈ.ಎನ್. ಗಂಗಾಧರ ಶೆಟ್ಟಿ ಅವರ ಅಭಿನಂದನಾ ಗ್ರಂಥ-ಸಮನ್ವಯ. ಅಭಿನಂದನೆ ಅಂಗವಾಗಿ ಭಾರತೀಯ ವಾಙ್ಮಯ ಪರಂಪರೆ: ಒಂದು ಪ್ರವೇಶಿಕೆ’ ಯಾಗಿ ಈ ಗ್ರಂಥವನ್ನು ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಂಪಾದಕತ್ವದಲ್ಲಿ ಪ್ರಕಟಿಸಲಾಗಿದೆ. ಧರ್ಮದ ಚೌಕಟ್ಟಿನಲ್ಲಿ ಉದ್ಯಮವನ್ನು ಕೈಗೊಂಡ ವಿರಳರ ಪೈಕಿ ವಿರಳರು ವೈ.ಎನ್. ಗಂಗಾಧರ ಶೆಟ್ಟಿ ಗೋಕಾಕ್ ಟ್ರಸ್ಟ್ ಅಧ್ಯಕ್ಷರೂ ಆದ ಅವರು ಸಾಹಿತ್ಯಾಸಕ್ತರು. ಇಂಥವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಅವರ ಆಸಕ್ತಿಕರ ವಿಷಯಗಳಾದ ಭಾರತೀಯ ವಾಙ್ಮಯ ಪರಂಪರೆ ಅಂದರೆ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಸಂವಿಧಾನ ಇತ್ಯಾದಿ ಕುರಿತ ಲೇಖನಗಳನ್ನು ಕೃತಿಯಲ್ಲಿ ಸಂಪಾದಿಸಲಾಗಿದೆ. ಇಲ್ಲಿಯ ಲೇಖನಗಳು ತಮ್ಮ ವಿಷಯ ವಸ್ತುವಿನ ಗಂಭೀರತೆ, ಭಾಷೆಯ ಪ್ರಬುದ್ಧತೆ, ನಿರೂಪಣಾ ಶೈಲಿ ಇತ್ಯಾದಿ ಸಾಹಿತ್ಯಕ ಅಂಶಗಳ ದೃಷ್ಟಿಯಿಂದ ಹಾಗೂ ಸಂಶೋಧನೆಗೂ ಉತ್ತಮ ಆಕರ ಗ್ರಂಥವಾಗಿದೆ.
©2025 Book Brahma Private Limited.