ಬಹುದೊಡ್ಡ ಪರಂಪರೆ ಹೊಂದಿರುವ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಶಿವಶರಣರ ಶೂನ್ಯ ಪೀಠಾರೋಹಣದ ಬೆಳ್ಳಿಹಬ್ಬದ ನೆವದಲ್ಲಿ ಮೂಡಿಬಂದ ಕೃತಿ ಇದು. ಗ್ರಂಥದ ಪ್ರಧಾನ ಸಂಪಾದಕ ಡಾ. ಎಂ.ಎಂ. ಕಲಬುರ್ಗಿ. ಸಂಪಾದಕರು ಡಾ. ಟಿ.ಆರ್. ಚಂದ್ರಶೇಖರ. ವಿದೇಶಿಯರ ದೃಷ್ಟಿಯಲ್ಲಿ ಲಿಂಗಾಯತ ಧರ್ಮ, ಸ್ವಾತಂತ್ಯ್ರಪೂರ್ವ ಜಿಲ್ಲಾ ಗೆಜೆಟಿಯರುಗಳಲ್ಲಿ ಲಿಂಗಾಯತ ಧರ್ಮ, ಸಮಾಜ ವಿಜ್ಞಾನಿಗಳ ದೃಷ್ಟಿಯಲ್ಲಿ ಲಿಂಗಾಯತರು, ಇತಿಹಾಸ, ಅಭಿನಂದನೆ-ಅಭವಂದನೆ ಎಂಬ ವರ್ಗಗಳನ್ನು ಗ್ರಮಥ ಒಳಗೊಂಡಿದೆ. ಸಾಮಾನ್ಯ ಅಭಿನಂದನಾ ಗ್ರಂಥದಂತೆ ಕಂಡರೂ ಅದರ ವಿಶಿಷ್ಟ ತಿರುಳಿನ ಕಾರಣಕ್ಕೆ ಕೃತಿಗೆ ತನ್ನದೇ ಆದ ಮಹತ್ವ ಇದೆ.
©2025 Book Brahma Private Limited.