ಮೂರ್ತಾಮೂರ್ತಾ

Author : ಎಂ. ಎಚ್. ಕೃಷ್ಣಯ್ಯ

Pages 304

₹ 160.00




Year of Publication: 2003
Published by: ವಿಜಯನಗರ ಬಿಂಬ
Address: ರಂಗಶಿಕ್ಷಣ ಕೇಂದ್ರ 195, 5 ‘ಎ’ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು - 560 104.
Phone: 080 23300967

Synopsys

ಆಕಾಶವಾಣಿ ಈರಣ್ಣ ಎಂತಲೇ ಪ್ರಸಿದ್ಧರಾಗಿದ್ದ ರಂಗಕರ್ಮಿ, ಪತ್ರಕರ್ತ, ಸಾಹಿತಿ ಎ.ಎಸ್. ಮೂರ್ತಿ ಅವರ ಬದುಕು ಬರಹ ಕುರಿತ ಅಭಿನಂದನಾ ಗ್ರಂಥ ಮೂರ್ತಮೂರ್ತ. ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ನಾಟಕ ಬರೆದು ನಿರ್ದೇಶಿಸುತ್ತಿದ್ದ ಇವರು ರಂಗಭೂಮಿಯ ಮೂಲಕ ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದವರು. ಇವರ ಬದುಕು, ಬರಹ, ರಂಗಭೂಮಿಯೆಡೆಗಿನ ಒಲವು, ಚಟುವಟಿಕೆಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸಿಕೊಡಬಲ್ಲ ಕೃತಿ ಇದಾಗಿದೆ. ಎಂ.ಎಚ್. ಕೃಷ್ಣಯ್ಯ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. 

About the Author

ಎಂ. ಎಚ್. ಕೃಷ್ಣಯ್ಯ
(21 July 1937)

ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು.  ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...

READ MORE

Related Books