‘ಕನಸುಗಳಿಗೆ ರೆಕ್ಕೆ ಕಟ್ಟಿ’ ಉನ್ನತ ಶಿಕ್ಷಣ ಮತ್ತು ಮೇಷ್ಟ್ರು ಎಂ.ಜಿ. ಚಂದ್ರಶೇಖರಯ್ಯ ಕುರಿತ ಸ್ಪಂದನೆ. ಈ ಪುಸ್ತಕವನ್ನು ಪತ್ರಕರ್ತ, ಲೇಖಕ ಕೆ.ವೆಂಕಟೇಶ್, ಮತ್ತು ನೆಲ್ಲುಕುಂಟೆ ವೆಂಕಟೇಶ್ ಅವರು ಸಂಪಾದಿಸಿದ್ದಾರೆ. ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಮೂರುವರೆ ದಶಕಗಳ ಕಾಲ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊಫೆಸರ್ ಎಂ.ಜಿ. ಚಂದ್ರಶೇಖರಯ್ಯ ಅವರ ಒಡನಾಡಿಗಳು, ಹಿರಿಯ ವಿದ್ಯಾರ್ಥಿಗಳು, ಸ್ನೇಹಿತರು ಗೌರವಾರ್ಥವಾಗಿ ಲೇಖನಗಳನ್ನು ರಚಿಸಿ ಈ ಮಹತ್ವದ ಕೃತಿಯನ್ನು ಸಂಪಾದಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಬೋಧನೆ ಎಂದರೆ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವುದು ಎನ್ನುವಷ್ಟರ ಮಟ್ಟಿಗೆ ಬೋಧಕರ ಕೆಲಸ ಮಿತಿಗೊಂಡಿದೆ. ಆದರೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ತಮ್ಮ ನಡೆ ನುಡಿಯಿಂದ ರೂಪಿಸುವ ಜೀವನ ಮೌಲ್ಯಗಳನ್ನು ನಿಡುಗಾಲ ಉಳಿಸಿಕೊಳ್ಳುವಂತೆ ಮಾಡುವ ಮುಖ್ಯ ಧಾರೆಗಳ ರಭಸದ ನಡುವೆ ಉಪಧಾರೆಗಳ ಒರತೆಗಳನ್ನು ಬಲಗೊಳಿಸುವಂತೆ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಅಧ್ಯಾಪಕರು ಅಪರೂಪ, ಅಂತಹ ಅಪರೂಪದ ಅಧ್ಯಾಪಕರಲ್ಲಿ ಒಬ್ಬರು ಎಂ.ಜಿ. ಚಂದ್ರಶೇಖರಯ್ಯ. ಅವರಿಗೆ ಅವರ ಆತ್ಮೀಯ ವಿದ್ಯಾರ್ಥಿಗಳು ಸಲ್ಲಿಸಿದ ಅಕ್ಷರ ನಮನ ಈ ಕೃತಿ.
©2024 Book Brahma Private Limited.