ಹಣತೆ - ಜಿ.ಎಸ್.ಎಸ್. ಅಭಿನಂದನ ಗ್ರಂಥ

Author : ಡಿ.ಎಸ್.ನಾಗಭೂಷಣ

Pages 624

₹ 300.00




Year of Publication: 2001
Published by: ಲೋಹಿಯಾ ಪ್ರಕಾಶನ
Address: ‘ಕ್ಷಿತಿಜ’ ಕಪ್ಪಗಲ್ಲು ರಸ್ತೆ, ಗಾಂಧಿ ನಗರ, ಬಳ್ಳಾರಿ- 583103
Phone: 0839257412

Synopsys

‘ಹಣತೆ’ ಜಿ.ಎಸ್.ಎಸ್. ಅಭಿನಂದನ ಗ್ರಂಥವಾಗಿದ್ದು ಲೇಖಕ ಡಿ.ಎಸ್. ನಾಗಭೂಷಣ ಈ ಕೃತಿಯನ್ನು ಸಂಪಾದಿಸಿದ್ದಾರೆ. ಕನ್ನಡದ ಹಿರಿಯ ಕವಿಗಳೂ, ಕಾವ್ಯ ಮೀಮಾಂಸಕರೂ, ಪ್ರಾಧ್ಯಾಪಕರೂ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಸಾಂಸ್ಕೃತಿಕ ಲೋಕದ ಎಲ್ಲ ಸೂಕ್ಷ್ಮ ಹಾಗೂ ಸಮತೋಲನಗಳ ಪ್ರಾತಿನಿಧಿಕ ಶಕ್ತಿಯೂ ಆಗಿದ್ದಂತಹ ಡಾ.ಜಿ.ಎಸ್. ಶಿವರುದ್ರಪ್ಪನವರಿಗೆ ಎಪ್ಪತ್ತೈದು ವರ್ಷ ತುಂಬಿದ ಸಂದರ್ಭದಲ್ಲಿ ಸಲ್ಲಿಸಿದ ಅಭಿನಂದನಾ ಗ್ರಂಥ ಇದಾಗಿದೆ. ಕೃತಿಯಲ್ಲಿ ಡಾ.ಯು.ಆರ್. ಅನಂತಮೂರ್ತಿ ಅವರ 'ನಮ್ಮ ಕಾಲದ ದ್ರೋಣರು', ಡಾ.ಎಚ್.ನರಸಿಂಹಯ್ಯ ಅವರ 'ಮನೆಯ ಹಿರಿಯ', ಡಾ.ಎಂ.ಚಿದಾನಂದಮೂರ್ತಿ ಅವರ 'ಆತ್ಮೀಯ ಮೇಷ್ಟ್ರು: ಸಹೃದಯ ಸಹೋದ್ಯೋಗಿ', ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಅವರ 'ಮುಪ್ಪುರಿಗೊಂಡ ಪ್ರತಿಭೆ', ಚೆನ್ನವೀರ ಕಣವಿ ಅವರ 'ಜೊತೆಗಾರ ಜಿ.ಎಸ್.ಎಸ್', ಡಾ.ಸಿ.ಎನ್. ರಾಮಚಂದ್ರನ್ ಅವರ 'ಸಫಲ ಕವಿ-ವಿಮರ್ಶಕ ಜಿಎಸ್ ಎಸ್', ದೇಜಗೌ ಅವರ 'ಸಾರಸ್ವತ ತಪಸ್ವಿ', ಡಾ. ರಾಜೇಂದ್ರ ಚೆನ್ನಿ ಅವರ 'ಜಿಎಸ್.ಎಸ್: ಪರಿವರ್ತನೆಗಳ ಸಂಧಿಭೂಮಿ', ಡಾ.ಹೆಚ್.ಎಸ್. ರಾಘವೇಂದ್ರರಾವ್ ಅವರ 'ಶಿವರುದ್ರಪ್ಪನವರ ಸಂಸ್ಕೃತಿ ಸಾಧನೆ: ಒಂದು ಪರಿಶೀಲನೆ', ಪ್ರೊ.ಕೆ.ಜಿ. ನಾಗರಾಜಪ್ಪ ಅವರ 'ಜಿಎಸ್.ಎಸ್ ಸಾಹಿತ್ಯದ ವೈಚಾರಿಕ ನೆಲೆಗಳು', ವಿ.ಚಂದ್ರಶೇಖರರ ನಂಗಲಿ ಅವರ 'ಕುವೆಂಪು ಪರಂಪರೆ ಮತ್ತು ಜಿಎಸ್.ಎಸ್', ಪ್ರೊ. ಎಂ.ರಾಮಚಂದ್ರ ಅವರ 'ಕನ್ನಡಿಗರ ಭಾವೈಕ್ಯದ ಸೇತುಬಂಧು', ಎಸ್. ನಟರಾಜ ಬೂದಾಳು ಅವರ 'ಬಡವರಾತ್ಮದ ಹಣತೆ', ಡಾ.ಡಿ.ಆರ್. ನಾಗರಾಜ್ ಅವರ 'ಜಿಎಸ್.ಎಸ್ ರವರ ಮೂರು ದಶಕದ ಕವಿತೆ', ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಕನ್ನಡ ಪರಂಪರೆ ಮತ್ತು ಜಿಎಸ್.ಎಸ್ ಕಾವ್ಯ, ಡಾ.ಎಚ್.ಎಸ್.ವೆಂಕಟೇಶಮೂರ್ತಿ 'ಜಿಎಸ್ ಎಸ್ ಕಾವ್ಯದ ಪ್ರಧಾನ ಆಶಯಗಳು', ಡಾ.ತಾಳ್ತಜೆ ವಸಂತಕುಮಾರ ಅವರ 'ಜಿ.ಎಸ್.ಎಸ್ ಕಾವ್ಯ ವಿಕಾಸ', ಡಿ.ಎಸ್. ನಾಗಭೂಷಣ ಅವರ 'ಜಿಎಸ್.ಎಸ್ ಅವರ ಕಾವ್ಯದ ಸಾಮಾಜಿಕ ಆಯಾಮಗಳು', ಕರುಣಾಕರ ಅವರ 'ಜಿಎಸ್.ಎಸ್ ಕಾವ್ಯದಲ್ಲಿ ವೈಚಾರಿಕತೆ', ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅವರ 'ಭಾವಗೀತಕಾರ ಜಿಎಸ್.ಎಸ್: ಟಿಪ್ಪಣಿ ರೂಪದ ಮಾತುಗಳು', ಡಾ.ಚಂದ್ರಶೇಖರ ಕಂಬಾರ ಅವರ 'ಮುಂಬೈ ಜಾತಕ:ಒಂದು ವಿಶ್ಲೇಷಣೆ', ಡಾ.ಜಾ.ಗೋ ಅವರ 'ಜಿಎಸ್.ಎಸ್ ರವರ ಮುಂಬೈ ಜಾತಕ', ಡಾ. ಸುಮತೀಂದ್ರ ನಾಡಿಗ ಅವರ 'ಜಿಎಸ್.ಎಸ್ ರವರ ಅವಸ್ಥೆ ಕವಿತೆ ಕುರಿತು', ಡಾ.ಕೆ.ವಿ. ನಾರಾಯಣ ಅವರ 'ಸೌಂದರ್ಯ ಸಮೀಕ್ಷೆ ಮತ್ತು ನವೋದಯ ಮೀಮಾಂಸೆ', ಪ್ರೊ.ಎಂ.ಗೋಪಾಲಕೃಷ್ಣ ಅಡಿಗ ಅವರ 'ಕಾವ್ಯಾರ್ಥ ಚಿಂತನ ಕುರಿತಂತೆ', ಬಿದರಹಳ್ಳಿ ನರಸಿಂಹಮೂರ್ತಿ ಅವರ 'ಜಿಎಸ್.ಎಸ್ ರವರ ಪ್ರವಾಸಕಥನಗಳು', ಡಾ.ಶ್ರೀಕಂಥ ಕೂಡಿಗೆ ಅವರ 'ಜಿಎಸ್.ಎಸ್ ಆತ್ಮಕತೆ:ಚತುರಂಗ' ಲೇಖನಗಳು ಸಂಕಲನಗೊಂಡಿವೆ.

ಹಾಗೇ ಕಾವ್ಯನಮನ ವಿಭಾಗದಲ್ಲಿ ಎಚ್.ದುಂಡಿರಾಜ್ ಅವರ 'ತೆಂಗಿನ ಮರ', ಸತ್ಯನಾರಾಯಣ ರಾವ್ ಅಣತಿ ಅವರ 'ಜಂಗಮ ಜನಾರ್ಧನ', ಎಸ್.ವಿ. ಪ್ರಭಾವತಿ ಅವರ 'ಪ್ರೀತಿ ಇಲ್ಲದ ಮೇಲೆ', ಟಿ.ಎಸ್. ನಾಗರಾಜಶೆಟ್ಟಿ ಅವರ 'ಕಾರ್ತಿಕದ ಬೆಳಕು', ಸವಿತಾ ನಾಗಭೂಷಣ ಅವರ 'ನವೋದಯದ ನಲವು ಜಿಎಸ್.ಎಸ್.' ಹಾಗೂ ಎಚ್.ಎಲ್. ಪುಷ್ಪ ಅವರ 'ನಿಮ್ಮ ಹಾದಿಯಲ್ಲಿ' ಕವಿತೆಗಳು ಸಂಕಲನಗೊಂಡಿವೆ.

ಜಿ.ಎಸ್.ಎಸ್ ಕಾವ್ಯ-ನನ್ನ ಕಣ್ಣಲ್ಲಿ ಎಂಬ ವಿಭಾಗದಲ್ಲಿ ಪ್ರೊ.ಕೀರ್ತಿನಾಥ ಕುರ್ತಕೋಟಿ ಅವರ 'ಅರಕ್ಷಿತ ಕಾವ್ಯ', ಡಾ.ಬಿ.ಎನ್. ಸುಮಿತ್ರಾಬಾಯಿ ಅವರ 'ನೆಲಮುಗಿಲ ತುಯ್ದಾಟ: ಹೊಸಹುಟ್ಟು', ವಿಷ್ಣುನಾಯ್ಕ ಅವರ 'ಪ್ರೀತಿಯ ಸಾನಿಧ್ಯ', ಕೆ.ಪಿ.ನಟರಾಜ ಅವರ 'ಎದೆತುಂಬಿ ಹಾಡಿದ ಕವಿ', ಶಂಕರ ಕಟಗಿ ಅವರ 'ಹಳೆಬೇರಿನಲ್ಲಿ ಹೊಸಚಿಗುರು', ಎ.ರಘುರಾಂ ಅವರ 'ಜಾಗೃತಿ ಚಿಂತನೆಗಳ ಕಾವ್ಯ', ಸ.ಉಷಾ ಅವರ 'ಕತ್ತಲ ದಾರಿಯಲ್ಲೊಂದು ಹಣತೆ', ಎಂ.ಆರ್. ಕಮಲ ಅವರ 'ಶಬರಿ ಪ್ರತಿಭೆಯ ಕವಿ', ಡಾ.ಜಿ.ಎಂ. ಹೆಗಡೆ ಅವರ 'ಕವಿತೆಗಳಲ್ಲಿ ಕಾವ್ಯಮೀಮಾಂಸೆ', ಎಚ್.ಆರ್. ಲೀಲಾವತಿ ಅವರ 'ಮಾಧುರ್ಯದ ಮೋಡಿ', ಶಿವಮೊಗ್ಗ ಸುಬ್ಬಣ್ಣ ಅವರ 'ವಿನಯದ ಧ್ವನಿ' ಲೇಖನಗಳು ಸಂಕಲನಗೊಂಡಿವೆ.

ಜೊತೆಗೆ ನಾ ಕಂಡ ಜಿಎಸ್ಎಸ್ ವಿಭಾಗದಲ್ಲಿ ಡಾ.ಎಸ್. ವಿದ್ಯಾಶಂಕರ್ ಅವರ 'ಬತ್ತದ ನೆನಪುಗಳು', ಡಾ.ಪಿ.ವಿ. ನಾರಾಯಣ ಅವರ 'ಕನ್ನಡ ಬದುಕನ್ನು ಕಟ್ಟುವಲ್ಲಿ ತೊಡಗಿದವರು', ಡಾ.ಸುಮತೀಂದ್ರ ನಾಡಿಗ ಅವರ 'ಆ ಪತ್ರ ಬಂಧು', ನಾ. ಡಿಸೋಜ ಅವರ 'ಸಾಹಿತ್ಯ ಸಂಘಟಕರಾಗಿ', ಎಚ್.ಎಸ್. ಪಾರ್ವತಿ ಅವರ 'ದಕ್ಷ ಆಡಳಿತಗಾರ', ಪ್ರಸನ್ನ ಅವರ 'ಬಂಡುಕೋರ ಪ್ರತಿಭೆಯ ಪೋಷಕ', ಬಿ.ಆರ್. ಲಕ್ಷ್ಮಣರಾವ್ ಅವರ 'ಆತ್ಮೀಯ ಹಿರಿಯ ಚೇತನ', ಡಿ.ಎಸ್. ನಾಗಭೂಷಣ ಅವರ 'ಎತ್ತಣಿಂದೆತ್ತ ಸಂಬಂಧವಯ್ಯಾ', ಡಾ.ಎಸ್. ಚಂದ್ರಶೇಖರ್ ಅವರ 'ಜಿಎಸ್ಎಸ್ ಎಂಬ ಗ್ಯಾಂಗ್ ಸ್ಟರ್', ಕುಂ.ವೀರಭದ್ರಪ್ಪ ಅವರ 'ನಮ್ಮ ಕಾಲದ ಕಾವ್ಯಗುರು', ಜಿ.ಪಿ. ಬಸವರಾಜು ಅವರ 'ಶ್ರದ್ಧೆ ಬಹಳ ದೊಡ್ಡದು', ಎಂ.ಚಂದ್ರಶೇಖರಯ್ಯ ಅವರ 'ತಲೆಮಾರು ವಿಚಾರಗಳ ಬೆಸುಗೆ', ಡಾ. ಬಸವರಾಜ ಸಬರದ ಅವರ 'ಸತ್ಯನಿಷ್ಠುರ', ಚಿಂತಾಮಣಿ ಕೊಡ್ಲೆಕೆರೆ ಅವರ 'ಕಾವ್ಯ ದೊಡ್ಡದು, ಕವಿಯೂ' ಲೇಖನಗಳು ಸಂಕಲನಗೊಂಡಿವೆ.

ನಮ್ಮ ಮೇಷ್ಟ್ರು ಜಿಎಸ್ಎಸ್ ಎಂಬ ಭಾಗದಲ್ಲಿ ಡಾ.ಸಿ.ಪಿ. ಕೃಷ್ಣಕುಮಾರ್ ಅವರ 'ತಸ್ಮೈಶ್ರೀ ಗುರವೇ ನಮಃ', ಪ್ರೊ. ಕೆ.ರಾಮದಾಸ್ ಅವರ 'ಗುರುತನವ ಮೀರಿದ ಗೆಳೆತನ', ಮಹೇಶ್ವರಪ್ಪ ಅವರ 'ಶಿಷ್ಯರು ಧನ್ಯರು', ಪ್ರೊ.ಆರ್. ನಿರ್ಮಲಾ ಅವರ 'ಬದುಕೇ ಬೆಳಕು ಎಂದ ಮಾರ್ಗದರ್ಶಿ', ಟಿ.ಎಸ್. ದಕ್ಷಿಣಾಮೂರ್ತಿ ಅವರ 'ನನ್ನ ಪೂರ್ವಜನ್ಮದ ಭಾಗ್ಯ', ಡಾ.ವಿಜಯಾ ಸುಬ್ಬರಾಜ್ ಅವರ 'ಹಳತು-ಹೊಸತುಗಳ ಸಮೀಕರಣ', ಪಿ.ರೇವಮ್ಮ ಅವರ 'ಸ್ನೇಹಗಂಗೆ', ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರ 'ವಿಚಿತ್ರಗಳ ಸಂಗಮ', ಡಾ.ಡಿ.ಮಂಗಳಾ ಪ್ರಿಯದರ್ಶಿನಿ ಅವರ 'ಅಪರೂಪದ ಆಚಾರ್ಯ', ಪ್ರೊ.ಬಿ.ಪಿ. ವೀರೇಂದ್ರ ಕುಮಾರ್ ಅವರ 'ಬಾಲಗಳಾಗಬೇಡಿ', ಡಾ.ಬೈರಮಂಗಲ ರಾಮೇಗೌಡ ಅವರ 'ಮೋಡಿಮಾಡಿದ ಮೇಷ್ಟ್ರು', ಹಾಗೂ ಎನ್. ನಾಗರಾಜು ಅವರ 'ಕನ್ನಡದ ನಂದಾದೀಪ' ಲೇಖನಗಳು ಸಂಕಲನಗೊಂಡಿವೆ.

ಮನೆಯಂಗಳದಿಂದ ವಿಭಾಗದಲ್ಲಿ ಜಿ.ಎಸ್. ರುದ್ರಾಣಿ ಶಿವರುದ್ರಪ್ಪ ಅವರ 'ನನ್ನ ಪತಿ ಜಿಎಸ್ಎಸ್ ಕೆಲವು ಸವಿನೆನಪುಗಳು', ಜಿ.ಎಸ್.ಲಲಿತಾಂಬಿಕೆ ಅವರ 'ನನ್ನ ಅಣ್ಣ ಜಿಎಸ್ಎಸ್', ಪದ್ಮಾ ಶಿವರುದ್ರಪ್ಪ ಅವರ 'ಜೀವನ ಸಂಗಾತಿ ಜಿಎಸ್ಎಸ್' ಲೇಖನಗಳು ಸಂಕಲನಗೊಂಡಿವೆ.

ಮುಖಾಮುಖಿ ವಿಭಾಗದಲ್ಲಿ ಎಚ್.ಎಸ್. ವೆಂಕಟೇಶಮೂರ್ತಿಯವರೊಂದಿಗೆ 'ಮುಖಾಮುಖಿ-1', ಡಿ.ಎಸ್. ನಾಗಭೂಷಣರವರೊಂದಿಗೆ 'ಮುಖಾಮುಖಿ-2', ಹಂಪಿ ಕನ್ನಡ ವಿ.ವಿ.ಯ ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗದ ಸದಸ್ಯರೊಂದಿಗೆ 'ಮುಖಾಮುಖಿ-3', ಜಿ.ಪಿ. ಬಸವರಾಜುರವರೊಂದಿಗೆ 'ಮುಖಾಮುಖಿ-4' ಸಂಕಲನಗೊಂಡಿವೆ. ಜೊತೆಗೆ ಕೆಲವು ಪತ್ರಕಗಳು ಹಾಗೂ ಕೃತಿ ವಿಮರ್ಶೆಗಳು ಸೇರಿದಂತೆ ಜಿಎಸ್ಎಸ್ ಅವರ ಜೀವನ ಪಥ ಈ ಕೃತಿಯಲ್ಲಿ ಸಂಕಲನಗೊಂಡಿವೆ.

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Related Books