ಬಂಡಾಯದ ಬೋಳಬಂಡೆಪ್ಪ : ಬದುಕು ಬರಹ ಸಂಘಟನೆ ರಮೇಶ ಅರೋಲಿ ಅವರ ಕೃತಿಯಾಗಿದೆ. ಇದು 1988ರಲ್ಲಿ ಆಸುಪಾಸಿನಲ್ಲಿ ನನ್ನೂರಿನ ಅಸ್ಕಿಹಾಳದ ಜನತಾ ಕಾಲೋನಿಯಲ್ಲಿ ಮೊಟ್ಟ ಮೊದಲು ನನ್ನ ಕಿವಿಸಜಟೆಯ ಮೇಲೆ ಬಿದ್ದ ಘೋಷಣೆ. ಆಗಷ್ಟೆ ಅಷ್ಟೊ ಇಷ್ಟೊ ಸಾರಿ ಕಲಿತು ಸರಕಾರಿ ನೌಕರಿ ಪಡೆದು ಎಚ್ಚೆತ್ತ ಕೀರಿ ಯುವಕರು ಅಂಬೇಡ್ಕರ್ ಯುವಕ ಮಂಡಳಿ', 'ಭೀಮಸೇವೆ'ಯ ಹೆಸರಿನಡಿ ಒಗ್ಗೂಡಿ, ಕೋಟು-ಬೂಟುಧಾರಿ ಬಾಬಾ ಸಾಹೇಬರ ಗಂಬೀರ ಮುಖದ ಆ ಫೋಟೋ ಹೊತ್ತು ಎತ್ತಿನ ಬರೀಲಿ ಮೆರವಣಿಗೆ ಬಂದರೆ, ಕೇರಿಗಳಿಗೆ ಅದೇನೋ ಹೊಸ ಹುಮ್ಮಸ್ಸು, ಚೈತನ್ಯ ಬಂದುಬಿಡುತ್ತಿತ್ತು. ಎಂದು ಲೇಖಕ ರಮೇಶ ಅರೋಲಿ ಲೇಖಕರ ಮಾತlಲ್ಲಿ ತಿಳಿಸಿದ್ದಾರೆ.
©2024 Book Brahma Private Limited.