ರಾಜಮಾರ್ಗ

Author : ಎಫ್.ಟಿ.ಹಳ್ಳಿಕೇರಿ

Pages 1052

₹ 1000.00




Year of Publication: 2017
Published by: ಡಾ. ಎಂ.ಎಂ. ಕಲಬುರ್ಗಿ ಅಧ್ಯಯನಸಂಸ್ಥೆ
Address: ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ

Synopsys

‘ರಾಜಮಾರ್ಗ’ ಡಾ. ವೀರಣ್ಣ ರಾಜೂರ ಅಭಿನಂದನ ಗ್ರಂಥ. ಈ ಬೃಹತ್ ಗ್ರಂಥವನ್ನು ಡಾ. ಎಫ್.ಟಿ.ಹಳ್ಳಿಕೇರಿ ಸಂಪಾದಿಸಿದ್ದಾರೆ. ಡಾ. ವೀರಣ್ಣ ರಾಜೂರ ಅವರದೊಂದು ವಿಶಿಷ್ಟ ವ್ಯಕ್ತಿತ್ವ, ವಿದ್ವಾಂಸ, ಪ್ರಾಧ್ಯಾಪಕ, ಉತ್ತಮ ನಟ-ನಾಟಕಕಾರ, ಸ್ನೇಹಿತ, ಒಳ್ಳೆಯ ಕುಟುಂಬಪ್ರೇಮಿ.

ಕನ್ನಡ ಸಾಹಿತ್ಯ ಲೋಕಕ್ಕೆ ಸುಮಾರು 126 ಗ್ರಂಥಗಳನ್ನು ನೀಡಿರುವ ಡಾ. ರಾಜೂರ,  ‘ಕನ್ನಡ ಸಾಂಗತ್ಯ ಸಾಹಿತ್ಯ’ ಎಂಬ 858 ಪುಟದ ಮಹಾಪ್ರಬಂಧ, 350 ಜನ ಸಾಂಗತ್ಯ ಕವಿಗಳು ಅವರ ಕೃತಿಗಳ ಆಮೂಲಾಗ್ರ ಅಧ್ಯಯನ,. ಗಾತ್ರದಲ್ಲಿ ಮಾತ್ರವಲ್ಲ, ಪಾತ್ರದ ದೃಷ್ಟಿಯಿಂದಲೂ ಮಹತ್ವ ಪಡೆದ ಕೃತಿ.

ಅದೇ ಕಾಲಕ್ಕೆ ಅದೇ ವಿಷಯವನ್ನೊಳಗೊಂಡ ಮಹಾಪ್ರಬಂಧ, ಸಾಂಗತ್ಯ ಪ್ರಕಾರ-ಒಂದು ಅಧ್ಯಯನ..ಹೀಗೆ ರಾಜೂರ ಅವರು ವಚನಸಾಹಿತ್ಯ ಸಂಪಾದನೆಗೆ ಕೊಟ್ಟಿರುವ ಕಾಣಿಕೆ ಅಪೂರ್ವ. ವಿದ್ವಾಂಸ ವೀರಣ್ಣ ರಾಜೂರ ಅವರಿಗೆ ಅರವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಷಷ್ಟ್ಯಬ್ಧಿ ಸಮಾರಂಭದಲ್ಲಿ ಅರ್ಪಿಸಿದ ಅಭಿನಂದನಾ ಗ್ರಂಥವಿದು. ಈ ಕೃತಿಯಲ್ಲಿ ವೀರಣ್ಣ ರಾಜಣ್ಣ ಅವರ ಬಗ್ಗೆ ಸಮಕಾಲೀನ ಸ್ನೇಹಿತರು, ಲೇಖಕರು ಬರೆದಿರುವ ಲೇಖನಗಳು, ವೀರಣ್ಣ ಬದುಕು- ಬರೆಹ ಸೇರಿದಂತೆ ಸಾಹಿತ್ಯ ಕ್ಷೇತ್ರದ ಮಹತ್ವದ ಕಾರ್ಯಗಳನ್ನು ದಾಖಲಿಸಿದ್ದಾರೆ.

About the Author

ಎಫ್.ಟಿ.ಹಳ್ಳಿಕೇರಿ
(01 June 1966)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಮತ್ತು ಮುಖ್ಯಸ್ಥರು. ಎಂ.ಎ, ಎಂಫಿಲ್ ಪಿಎಚ್‌.ಡಿ ಪದವಿ ಪಡೆದಿರುವ ಅವರಿಗೆ ಹಸ್ತಪ್ರತಿ-ಗ್ರಂಥಸಂಪಾದನೆ, ಹಾಲುಮತ ಸಂಸ್ಕ್ರತಿ, ಹಳೆಗನ್ನಡ-ನಡುಗನ್ನಡ -ನಡುಗನ್ನಡ ಸಾಹಿತ್ಯ, ಯೋಗವಿಜ್ಞಾನ ಆಸಕ್ತಿಯ  ಅಧ್ಯಯನದ ಕ್ಷೇತ್ರಗಳು. ’ಕೆರೆಯ ಪದ್ಮರಸ ಮತ್ತು ಆತನ ವಂಶಜರು , ಕಂಠಪತ್ರ (1,2,3), ಹಾಲುಪತ್ರ’ ಪ್ರಕಟಿತ ಕೃತಿಗಳು. ಹಾಲುಮಠ ಅಧ್ಯಯನ ಪೀಠದ ಸಂಚಾಲಕ, ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ  ಮುಖ್ಯಸ್ಥರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುನ್ನತ ಸಂಶೋಧನಾ ಗ್ರಂಥ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರಿಗೆ ...

READ MORE

Related Books