ಜ್ಞಾನ ಸೂತ್ರ

Author : ಪಿ. ನಾಗರಾಜ

Pages 280

₹ 300.00




Year of Publication: 2023
Published by: ಉದಯ ಪ್ರಕಾಶನ
Address: #984, 11ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
Phone: 8023389143

Synopsys

'ಜ್ಞಾನ ಸೂತ್ರ' ಪಿ.ನಾಗರಾಜ ಅವರ ಸಂಪಾದಿತ ಕೃತಿಯಾಗಿದೆ. ಪ್ರಸ್ತುತ ಕೃತಿಯ ವಿನ್ಯಾಸ ಬಹು ವಿಶಿಷ್ಟವಾದುದು. ಸಾಹಿತ್ಯಾಭಿವ್ಯಕ್ತಿ ಮತ್ತು ಕೃತಿಗಳ ಪ್ರಸ್ತುತಿಗಳಲ್ಲಿ ವಿನೂತನ ಬಗೆಯ ಹೊಸತನವನ್ನು ಕಾಣುತ್ತಿರುವ ಇಂದಿನ ದಿನಗಳಲ್ಲಿ ಸಂದರ್ಶನಗಳ ಮೂಲಕ ವಿದ್ವಾಂಸರೊಬ್ಬರ ವಿಚಾರಗಳನ್ನು ಒಂದೆಡೆ ಸಂಕಲಿಸುವ ಪ್ರಯತ್ನ ಈ ಕೃತಿಯದಾಗಿದೆ. ಸಂದರ್ಶನಗಳಲ್ಲಿನ ಪ್ರಶ್ನೆಗಳು ಸ್ಕೂಲವಾಗಿ ನಿಶ್ಚಿತವಾದ ವಿಷಯದ ಚೌಕದ್ದೊಂದನ್ನು ಹೊಂದಿರುವುವಾದರೂ ಅಲ್ಲಿ ಚರ್ಚಿತವಾದ ವಿಚಾರಗಳ ವ್ಯಾಪ್ತಿ ಹಿರಿದಾದುದು. ದೇಶೀಯ, ರಾಷ್ಟ್ರೀಯ ಮತ್ತು ಜಾಗತಿಕ ನೆಲೆಗಳಿಗೆ ಅವು ಹಬ್ಬುತ್ತವೆ. ಆ ಸಂಬಂಧದ ಸೂಕ್ಷ್ಮತೆಗಳನ್ನು ಬಹು ಅರ್ಥಪೂರ್ಣವಾಗಿ ತೆರೆದಿಡುತ್ತವೆ. ಇಲ್ಲಿ ಮಲ್ಲೇಪುರಂ ವೆಂಕಟೇಶ ಅವರ ಸಾಹಿತ್ಯಾಸಕ್ತಿಯ ನೆಲೆಗಳು ಪ್ರಕಟಗೊಳ್ಳುತ್ತವೆ, ಅವರ ಸಾಹಿತ್ಯಕ-ಭಾಷಿಕ- ಸಾಮಾಜಿಕ ದೃಷ್ಟಿಕೋನಗಳ, ಕಾಳಜಿಗಳ ಪರಿಚಯ ನಮಗಾಗುತ್ತವೆ. ಅವರ ವೈಯಕ್ತಿಕ ಬದುಕಿನ ನೆಲೆಗಳು ಮತ್ತು ಅವರು ತುಳಿದ ಹಾದಿಯ ನೋಟ ಪ್ರಕಟವಾಗುತ್ತವೆ. ಇಲ್ಲಿಯ ಸಂದರ್ಶನಗಳಿಗೆ ಕೇವಲ ಸಾಹಿತ್ಯಕವಾದ ನೆಲೆಯಲ್ಲಿ ಮಾತ್ರವಲ್ಲದೆ, ಒಟ್ಟಾರೆ ಸಾಂಸ್ಕತಿಕ ನೆಲೆಯಲ್ಲಿ ಅನನ್ಯವಾದ ಪ್ರಸ್ತುತತೆಯಿದೆ.

ಈ ಕೃತಿಯಲ್ಲಿನ ಲೇಖನಗಳು ಹೀಗಿವೆ; ಡಾ. ಬೈರಮಂಗಲ ರಾಮೇಗೌಡ ಅವರ ‘ನಮ್ಮ ನಡುವಿನ ಬಹುಶ್ರುತ ವಿದ್ವಾಂಸ’, ಡಾ. ಗುರುಪಾದ ಮರಿಗುದ್ದಿ ಅವರ ‘ಕನ್ನಡ ಸಂಸ್ಕೃತಿಯ ವಿಸ್ತರಣಾ ದಾರಿಗಳು’, ಎಂ.ಎನ್, ಸುಂದರರಾಜ್ ಅವರ ‘ವಿದ್ವತ್ಪರಂಪರೆಯ ಕೊಡಿ’, ಟಿ.ಎನ್.ವಾಸುದೇವಮೂರ್ತಿ ಅವರ ‘ಪ್ರೊ. ಮಲ್ಲೇಪುರಂ ಸಮಗ್ರ ನೋಟ’, ಸಿ. ಸುದರ್ಶನ ಅವರ ‘ಅನುಭಾವದ ನೂತನ ನೆಲೆಗಳು’, ಮೋಹನ ಭಾಸ್ಕರ ಹೆಗಡೆ ಅವರ ‘ಎತ್ತರಕ್ಕೇರಿದ ಮಲ್ಲೇಪುರಂ’, ಎಸ್. ಚಂದ್ರಮೋಹನ್ ಅವರ ‘ಸಂಸ್ಕೃತ-ಪಾಲಿ-ಪ್ರಾಕೃತಗಳ ಸುತ್ತ ಮುತ್ತ’, ದೇವು ಪತ್ತಾರ ಅವರ ‘ಇಳೆಯ ಬೆರಗು’ ಸಮಸ್ತ ನೋಟ, ಕೆ.ಎ. ಓಬಳೇಶ್ ಅವರ ‘ಸ್ವಯಂಪ್ರಭೆ’ ಬೇಕು; ಪರಪ್ರಭೆ ಸಾಕು, ಎಂ. ನಾಗರಾಜ ಅವರ ‘ಅಂಗಾಂಗಿ ವಿಮರ್ಶೆಯ ಅನನ್ಯಚಿಂತಕ’, ನಾಗಣ್ಣ ಕಿಲಾರಿ ಅವರ ‘ಮಲ್ಲೇಪುರಂ ಸಂಸ್ಕೃತಿ ಬೆಳಗು’, ಕೆ. ಶಾರದಾ ಅವರ ‘ಅಲಕ್ಷಿತ ಶಾಸ್ತ್ರಸಾಹಿತ್ಯಕ್ಕೆ ಅಸಲಿ ಚರಿತ್ರೆಯಿದೆ’, ಶಿವಾನಂದ ಕೆಳಗಿನಮನಿ ಅವರ ‘ಸಂಶೋಧನೆಯ ಉನ್ನತಶಿಖರ’, ಎಸ್.ಎನ್. ಗಂಗಾಧರಯ್ಯ ಅವರ ‘ಸಾಂಸ್ಕೃತಿಕ ಪ್ರಜ್ಞೆಯನ್ನು ಸಾಕ್ಷೀಕರಿಸುತ್ತಾ’, ವಿಜಯಕುಮಾರಿ ಎಸ್. ಕರಿಕಲ್ ಅವರ ‘ಶಂಬಾ ಕೃತಿಸಂಪುಟಗಳ ಕುರಿತು’, ಎಸ್.ಎಸ್. ಅಂಗಡಿ ಅವರ ‘ಮಲ್ಲೇಪುರಂ ಅವರೊಂದಿಗೆ, ಪಿ. ನಾಗರಾಜ ಅವರ ‘ಗುರುಗಳೊಡನೆ ಖಾಸ್ ಬಾತ್’, ಮಲ್ಲೇಶಪ್ಪ ಸಿದ್ರಾಂಪೂರ ಅವರ ‘ಸಮಗ್ರೀಕರಣದ ಅಖಂಡದೃಷ್ಟಿ ಅಗತ್ಯ’, ಹಾ.ಮಾ. ನಾಗಾರ್ಜುನ ಅವರ ‘ಹಲವು ಮುಖಗಳ ಪರಿ’, ಸತ್ಯಮಂಗಲ ಆರ್. ಮಹಾದೇವ ಅವರ ‘ಕಣ್ಣು ಕಿರಿದು ಆಕಾಶ ಹಿರಿಯ’, ಎಂ.ಬಿ.ಕಟ್ಟಿ ಅವರ ‘ಬರಹಗಾರನ ಕಣ್ಣು-ಕಿವಿ ಸೂಕ್ಷ್ಮವಾಗಿರಬೇಕು’, ಸಂತೋಷ ಹಾನಗಲ್ಲ ಅವರ ‘ಸಂಸ್ಕೃತ ಭಾಷೆಯ ಸುತ್ತಮುತ್ತ’, ಗುರುರಾಜ ಪೋಶೆಟ್ಟಿಹಳ್ಳಿ ಅವರ ‘ಕುಟುಂಬ ವ್ಯವಸ್ಥೆ ಛಿದ್ರಗೊಳ್ಳುತ್ತಿದೆ’, ರೇಷ್ಮಾ ರಾವ್ ಸೊನಿ ಅವರ ‘ದೇವಭಾಷೆ ಬಗ್ಗೆ ಮಲ್ಲೇಪುರಂ’ ಕುರಿತ ಬರಹಗಳನ್ನು ನಾವು ಇಲ್ಲಿ ಕಾಣಬಹುದು. 

About the Author

ಪಿ. ನಾಗರಾಜ

ಪಿ. ನಾಗರಾಜ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೊಡ್ಲಹಳ್ಳಿ ಗ್ರಾಮದಲ್ಲಿ ಜನಿಸಿದರು. ತಾಯಿ ದೇವಿರಮ್ಮ ತಂದೆ ಲೇ. ವಿ. ಪಾತಯ್ಯನವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಲ್ಲಿ ಮುಗಿಸಿ, ನಂತರ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಪೂರೈಸಿದರು. ಅನಂತರ ಬೆಂಗಳೂರು ವಿಶ್ವವಿದ್ಯಾಲಯದ 'ಕನ್ನಡ ಅಧ್ಯಯನ ಕೇಂದ್ರ'ದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಅದೇ ವಿಶ್ವವಿದ್ಯಾಲಯದಿಂದ “ಹಿರಿಯೂರು ತಾಲ್ಲೂಕಿನ ಕಾಡುಗೊಲ್ಲರು: ಒಂದು ಸಾಂಸ್ಕೃತಿಕ ಅಧ್ಯಯನ” ಎಂಬ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದರು. ಬೆಂಗಳೂರಿನ ವಿಜಯ ಪದವಿ ಕಾಲೇಜಿನಲ್ಲಿ ಹದಿನಾಲ್ಕು ...

READ MORE

Related Books