ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಅವರು ನವ್ಯ ಚಳುವಳಿಯ ಪ್ರಾರಂಭದ ದಿನಗಳಲ್ಲಿ ಬರವಣಿಗೆ ಆರಂಭಿಸಿದವರು. ಕಳೆದ ಮೂರು ದಶಕಗಳ ಅವಧಿಯಲ್ಲಿ ವಿಮರ್ಶೆಯ ಅಸ್ಮಿತೆ ಉಳಿಸಲು ಶ್ರಮಿಸಿದ ಹಿರಿಯ ಲೇಖಕರು. ರಾಘವೇಂದ್ರರಾವ್ ಅವರು ತಮ್ಮ ಬರವಣಿಗೆಯನ್ನು ಕೇವಲ ವಿಮರ್ಶೆಗೆ ಮಾತ್ರ ಸೀಮಿತಗೊಳಿಸಿಕೊಂಡವರಲ್ಲ. ಅನುವಾದ- ಸಂಶೋಧನೆ ಹಾಗೂ ಸಂಪಾದನೆಗಳಲ್ಲಿಯೂ ಪ್ರಮುಖ ಕೆಲಸ ಮಾಡಿದ್ದಾರೆ. ಎಚ್‌ಎಸ್‌ಆರ್ ಅವರ ಬರಹಕ್ಕೆ ಬಾಗಿನ ನೀಡುವ ಕೆಲಸವನ್ನು ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಮತ್ತು ವಿಕ್ರಮ ವಿಸಾಜಿ ಮಾಡಿದ್ದಾರೆ. ಕಾವ್ಯಮನೆ ಪ್ರಕಾಶನ ’ನುಡಿ ಬಾಗಿನ’ ಅರ್ಪಿಸಿ ನುಡಿ ಗೌರವ ಸಲ್ಲಿಸಿದೆ. ಈ ಕೃತಿಯಲ್ಲಿ ನಾಲ್ಕು ಸಂದರ್ಶನಗಳಿವೆ. ಪ್ರತೀ ಸಂದರ್ಶನದ ನೆಲೆಗಳೂ ಒಂದಕ್ಕಿಂತ ಮತ್ತೊಂದು ಭಿನ್ನ.
©2025 Book Brahma Private Limited.