ಒಡನಾಡಿ ಸಬಿಹಾ

Author : ಎಚ್.ಎಸ್. ಅನುಪಮಾ

Pages 404

₹ 400.00




Year of Publication: 2021
Published by: ಕವಿ ಪ್ರಕಾಶನ
Address: ಕವಲಕ್ಕಿ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
Phone: 94802 11320.

Synopsys

‘ಒಡನಾಡಿ ಸಬಿಹಾ’ ಕೃತಿಯು ಸಬಿಹಾ ಭೂಮಿಗೌಡ ಅವರ ಅಭಿನಂದನಾ ಹೊತ್ತಗೆ. ಲೇಖಕರಾದ ದು. ಸರಸ್ವತಿ, ಆರ್. ಸುನಂದಮ್ಮ, ಓಂಕಾರ ಗೌಡ ಕಾಕಡೆ ಹಾಗೂ ಎಚ್.ಎಸ್. ಅನುಪಮಾ ಅವರ ಸಂಪಾದಿತ ಕೃತಿ  ಇದು. ಈ ಸಂಕಲನದಲ್ಲಿ ಮಹಿಳಾ ಚಳವಳಿ ನಡೆದು ಬಂದದಾರಿ, ಸಮಾನತೆಯೆಡೆಗೆ, ದಲಿತ, ಬಂಡಾಯ, ರೈತ ಚಳವಳಿ, ಮಾರ್ಕ್ಸ್ ವಾದ, ಭಾರತದಲ್ಲಿ ಚಳವಳಿಯಾಗಿ ಮಹಿಳಾ ಅಧ್ಯಯನ, ಕರ್ನಾಟಕ ಕೋಮು ಸೌಹಾರ್ದ ಚಳವಳಿ ಮತ್ತು ಪರಂಪರೆ ಸಾಹಿತ್ಯ ಮತ್ತು ಚಳವಳಿ ಹಾಗೂ ಶತಮಾನದ ಮಹಾ ಪಯಣಗಳು ಇಲ್ಲಿ ಸೇರಿಕೊಂಡಿವೆ. ಕಳೆದೆರಡು ದಶಕದ ಕನ್ನಡ ಮಹಿಳಾ ಸಾಹಿತ್ಯ ಹಾಗೂ ಸಬಿಹಾ ಸಾಹಿತ್ಯವಲೋಕನದ ಜೊತೆಗೆ ಒಡನಾಟಗಳ ಕುರಿತಾಗಿ ಈ ಕೃತಿಯಲ್ಲಿ 71ಲೇಖನಗಳಿವೆ. ಒಟ್ಟಿಗೆ 7ಅಧ್ಯಾಯಗಳಿದ್ದು ಇದೊಂದು ಸಂಗ್ರಹ ಯೋಗ್ಯ ಸಂಚಿಕೆ ಮಾತ್ರವಲ್ಲದೇ, ಕರ್ನಾಟಕ ಚಳವಳಿಗಳು ಹಾಗೂ ಎರಡು ದಶಕದ ಕನ್ನಡ ಮಹಿಳಾ ಸಾಹಿತ್ಯ ಕುರಿತಾಗಿ ಅಧ್ಯಯನಶೀಲರಿಗೆ ಉತ್ತಮ ಆಕರ ಗ್ರಂಥವಾಗಿದೆ.

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books