ಡಾ. ರಾಜಶೇಖರ ಇಚ್ಚಂಗಿ ಅವರ ಬದುಕು -ಬರಹ ಕುರಿತ ಅಭಿನಂದನ ಗ್ರಂಥ-ರಾಜರಶ್ಮಿ. ಸಾಹಿತಿಗಳಾದ ಡಾ. ವಿ.ಎಸ್. ಮಾಳಿ ಹಾಗೂ ಡಾ. ಅಶೋಕ ನರೋಡೆ ಅವರ ಸಂಪಾದಕತ್ವದಲ್ಲಿ ಈ ಕೃತಿ ಪ್ರಕಟಗೊಂಡಿದೆ. ಅಧ್ಯಯನ ಶ್ರದ್ಧೆ, ಪ್ರಾಮಾಣಿಕತೆ, ಬರಹದ ಬದ್ಧತೆ, ಬದುಕಿನ ಪರಿಶುದ್ಧತೆ ಹಾಗೂ ಹೊಸತನದ ತುಡಿತದ ಕ್ರಿಯಾಶೀಲತೆ ಇವು ಡಾ. ರಾಜಶೇಖರ ಇಚ್ಚಂಗಿ ಅವರ ಸಾರ್ಥಕ ಜೀವನದ ಪಂಚಪ್ರಾಣಗಳು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮದ ರಾಜಶೇಖರ ಇಚ್ಚಂಗಿ ಅವರು ಒಟ್ಟು 28 ಕೃತಿಗಳನ್ನು ರಚಿಸಿದ್ದು, ದಣಿವರಿಯದ ನಿರಂತರ ದುಡಿಮೆಯಿಂದ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಇಡೀ ಗ್ರಂಥವನ್ನು ನಾಲ್ಕು ಪ್ರಮುಖ ವಿಭಾಗಗಳನ್ನಾಗಿಸಿ, ಮೊದಲೆರಡು ಭಾಗಗಳು ಕ್ರಮವಾಗಿ, .ಡಾ. ಇಚ್ಚಂಗಿ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯವನ್ನು ದರ್ಶಿಸುತ್ತವೆ. ಮೂರನೇ ಭಾಗದಲ್ಲಿ ಬೆಳಗಾವಿ ಜಿಲ್ಲೆಯ ಸಂಶೋಧನ ರಶ್ಮಿ, ನಮ್ಮ ಜಿಲ್ಲೆಯ ಶೋಧ, ಮಾರ್ಗದ ಸ್ಥೂಲ ಸಮೀಕ್ಷೆ ಇದೆ. ನಾಲ್ಕನೇ ಭಾಗದಲ್ಲಿ ಚಿತ್ರಸಂಪುಟವಿದೆ. ಇಚ್ಚಂಗಿಯವರ ಬದುಕಿನ ವಿಭಿನ್ನ ಮಜಲುಗಳನ್ನು ಪ್ರತಿಮಿಸುವ ಅಪರೂಪದ ದೃಶ್ಯಗಳು ಈ ಸಂಪುಟದಲ್ಲಿವೆ ಎಂದು ಸಂಪಾದಕರು ತಮ್ಮ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.
©2024 Book Brahma Private Limited.