ಸಂಗೀತ ಕಲಾರತ್ನ ಪ್ರೊ. ಆರ್.ಎನ್. ದೊರೆಸ್ವಾಮಿ ಅಭಿನಂದನ ಗ್ರಂಥ- ‘ಮಹತೀ’. ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ, ವಿದ್ವಾನ್ ಆರ್.ಕೆ. ಶ್ರೀಕಂಠನ್, ವಿದ್ವಾನ್ ಆರ್.ಆರ್. ಕೇಶವಮೂರ್ತಿ, ಬಿವಿಕೆ ಶಾಸ್ತ್ರಿ, ಪ್ರೊ. ರಾ. ಸತ್ಯನಾರಾಯಣ, ಪ್ರೊ.ಜಿ.ಟಿ. ನಾರಾಯಣರಾವ್ ಮೊದಲಾದ ದಿಗ್ಗಜರ ಅಭಿನಂದನ ಸಮಿತಿಯಲ್ಲಿ ಇದ್ದರು. ಪ್ರೊ. ಆರ್.ಎನ್.ಡಿ. ಅವರ ಭಾಷಣಗಳ ಲಿಖಿತರೂಪಗಳು ಮತ್ತು ಲೇಖನಗಳು ಹಾಗೂ ಅವರೇ ರಚಿಸಿದ್ದ ಗೇಯರಚನೆಗಳು, ಅವರ ಕೃತಿಗಳ ಪರಿಚಯ ಮತ್ತು ವಿಮರ್ಶೆ, ಅವರ ಅಭಿಮಾನಿಗಳು ಬರೆದ ಅಭಿನಂದನ ಲೇಖನಗಳು, ಅವರ ಜೀವನದ ಹೆಚ್ಚಿನ ವಿವರಗಳು ಏಳು ಭಾಗಗಳಲ್ಲಿ ಸೇರಿದ ಅಭಿನಂದನ ಗ್ರಂಥ ಇದಾಗಿದೆ.
©2025 Book Brahma Private Limited.