ಡಾ. ಜಿ.ಎಸ್. ಆಮೂರರ ವಿಮರ್ಶೆ ಕೃಷಿ ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯ ಕುರಿತು ವಿವಿಧ ಲೇಖಕರು ಬರೆದು ಅರ್ಪಿಸಿದ ಅಭಿನಂದನಾ ಕೃತಿ-ಸಹೃದಯ ಸಂವಾದ. ಕನ್ನಡ ವಿಮರ್ಶೆಯ ಪರಂಪರೆ ಎಂಬ ಉಪಶೀರ್ಷಿಕೆಯಡಿ ಈ ಕೃತಿಯನ್ನು ಸಾಹಿತಿಗಳಾದ ಡಾ. ಎಸ್. ವಿದ್ಯಾಶಂಕರ ಹಾಗೂ ಡಾ. ಜಿ.ಎಂ. ಹೆಗಡೆ ಸಂಪಾದಿಸಿದ್ದಾರೆ. ಜಿ.ಎಸ್. ಆಮೂರರು ವ್ಯಕ್ತಿಚಿತ್ರಣ, ವಿಮರ್ಶೆ, ಲೇಖನ ಹೀಗೆ ವಿವಿಧ ಪ್ರಕಾರಗಳ ಗಂಭೀರ ಅಧ್ಯಯನ ಹಾಗೂ ಕೃತಿ ರಚನೆಕಾರರ ಪೈಕಿ ಒಬ್ಬ ವಿದ್ವಾಂಸರು. ಹತ್ತು ಹಲವು ಕೃತಿಗಳನ್ನು ಇಂಗ್ಲಿಷ್ ನಲ್ಲೂ ಬರೆದಿದ್ದು ರಾಷ್ಟ್ರೀಯವಾಗಿ ವಿಶೇಷವಾಗಿ ವಿಮರ್ಶೆ ಲೋಕದಲ್ಲಿ ಗಮನ ಸೆಳೆದವರು. ಆಮೂರರ ಸಾಹಿತ್ಯಕ ಕೃತಿಗಳ ಮೂಲಕ ಅವರ ವ್ಯಕ್ತಿತ್ವದ ಎತ್ತರವನ್ನು ಕಾಣಿಸುವ ಪ್ರಯತ್ನವೇ ಅವರ ಅಭಿನಂದನಾ ಗ್ರಂಥ.
©2024 Book Brahma Private Limited.