`ವಿಜಯಪಥ’ ಕೃತಿಯು ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಸಂಪಾದಿಸಿರುವ ಟಿ.ಎಂ. ವಿಜಯಕುಮಾರ ಅವರ ಅಭಿನಂದನಾ ಗ್ರಂಥವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸುರೇಶ ಕಂಬಳಿ ಗಬ್ಬೂರ ಅವರು `ನೀವು ನಡೆದು ಹೋಗುವ ದಾರಿಯಲ್ಲಿ ನಿಮ್ಮ ಬಳಿ ಇರುವ ಒಳ್ಳೆಯ ಗುಣಗಳೆಂಬ ಹೂಗಳನ್ನು ಚೆಲ್ಲುತ್ತಾ ಹೋಗಿರಿ. ನೀವು ಇನ್ನೊಮ್ಮೆ ಅದೇ ದಾರಿಯ ಮೇಲೆ ನಡೆದು ಹೋಗಲಿಕ್ಕಿಲ್ಲ.” ಈ ಮಾತನ್ನು ಅಕ್ಷರಶಃ ಅನುಷ್ಠಾನದಲ್ಲಿ ತಂದಿರುವವರು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಪ್ಪ ಅಂಡಗಿ ಚಿಲವಾಡಗಿಯವರು. ಈ ಕೃತಿಯಲ್ಲಿ ಟಿ.ಎಂ.ವಿಜಯಕುಮಾರ ಅವರು ಬದುಕಿನ ಪಥದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿ, ಸ್ಮರಣಾರ್ಹ ಸೇವೆ ಸಲ್ಲಿಸಿದ್ದಾರೆ. ಅವರನ್ನು ಕುರಿತು ಹನುಮಂತಪ್ಪ ಅಂಡಗಿ ಚಿಲವಾಡಗಿಯವರು ಉತ್ತಮ ಅಭಿನಂದನಾ ಗ್ರಂಥವನ್ನು ಹೊರ ತಂದಿರುವುದು ಸಂತಸದ ಸಂಗತಿಯಾಗಿದೆ’ ಎಂದಿದ್ದಾರೆ.
©2024 Book Brahma Private Limited.