ಲೇಖಕರಾದ ಪ್ರಭಾಕರ ಜೋಶಿ ಹಾಗೂ ಅವಿನಾಶ ಬೋರಂಚಿ ಅವರು ಸಂಪಾದಿಸಿರುವ ಕೃತಿ ಸಿದ್ಧ ಚೇತನ. ಈ ಖೃತಿಯು ಸಿದ್ದಪ್ಪ ತಳ್ಳಳ್ಳಿ ಅವರ ಅಭಿನಂದನಾ ಗ್ರಂಥವಾಗಿದೆ. ಕಲುಬುರಗಿಯ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರು ಬಸವರಾಜ ಪಾಟೀಲ ಸೇಡಮ್ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಆತ್ಮೀಯ ಮಿತ್ರರಾದ ಸಿದ್ಧಪ್ಪ ತಳ್ಳಳ್ಳಿ ಅವರಿಗೆ ಅಭಿನಂದನಾ ಗ್ರಂಥವನ್ನು ಸಮರ್ಪಣೆ ಮಾಡಿರುವುದು ಸಂತಸದ ಸಂಗತಿ. ಸಿದ್ದಪ್ಪನವರ ಪೂಜ್ಯ ತಂದೆಯವರಾದ ಶ್ರೀ ಸಿದ್ರಾಮಪ್ಪ ತಳ್ಳಳ್ಳಿಯವರ ಗುಣಾನುರಾಗಿ ಸ್ವಭಾವವನ್ನು ಹೊಂದಿ, ವಾದ-ಬೇಧಗಳ ಸೀಮೆಯನ್ನು ದಾಟಿ, ಎಲ್ಲರ ನೋವು-ನಲಿವುಗಳಲ್ಲಿ ಭಾಗಿಯಾಗಿ ಬಹುದೊಡ್ಡ ಬಳಗವನ್ನು ಹೊಂದಿರುವ ಅವರು, ಕನ್ನಡ, ಸಾಹಿತ್ಯ, ಸಂಗೀತ, ಕಲೆ, ಶಿಕ್ಷಣ, ಉದ್ಯೋಗ, ಧರ್ಮ, ಬದುಕು ಮುಂತಾದ ಕ್ಷೇತ್ರಗಳಲ್ಲಿ ತನ್ನದೆ ಆದ ಅಪೂರ್ವ ಛಾಪು ಮೂಡಿಸಿದ್ದಾರೆ. ಸೇಡಂ ನಗರವನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಜ್ಯದ ಉದ್ದಗಲಕ್ಕೂ ಆನೇಕ ಶ್ರೇಷ್ಠರ, ಸಜ್ಜನರ ಸಂಪರ್ಕ ಹೊಂದಿ, ರಾಷ್ಟ್ರಕೂಟರ ನೆಲಕ್ಕೆ ಸಾಂಸ್ಕೃತಿಕ ಆಯಾಮ ತಂದುಕೊಟ್ಟಿರುವ ಅವರ ಬಾಳು ಪ್ರತಿಮೂರ್ತಿಯಾಗಿ ಹೊರಹೊಮ್ಮಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ. ನನ್ನ ಬದುಕಿನುದ್ದಕ್ಕೂ ಆತ್ಮೀಯ ಮಿತ್ತರಾದ ಶ್ರೀ ಸಿದ್ದಪ್ಪ ತಳ್ಳಳ್ಳಿ ಅವರಿಗಾಗಿ 'ಸಿದ್ಧ ಚೇತನ' ಆಭಿನಂದನಾ ಗ್ರಂಥವನ್ನು ತಂದಿರುವ ಆತ್ಮೀಯ ಬಳಗಕ್ಕೆ ನನ್ನ ಅಭಿನಂದನೆಗಳು ಎಂದಿದ್ದಾರೆ.
©2024 Book Brahma Private Limited.