‘ರಾಜಮಾರ್ಗ’ ಡಾ. ವೀರಣ್ಣ ರಾಜೂರ ಅಭಿನಂದನ ಗ್ರಂಥ. ಈ ಬೃಹತ್ ಗ್ರಂಥವನ್ನು ಡಾ. ಎಫ್.ಟಿ.ಹಳ್ಳಿಕೇರಿ ಸಂಪಾದಿಸಿದ್ದಾರೆ. ಡಾ. ವೀರಣ್ಣ ರಾಜೂರ ಅವರದೊಂದು ವಿಶಿಷ್ಟ ವ್ಯಕ್ತಿತ್ವ, ವಿದ್ವಾಂಸ, ಪ್ರಾಧ್ಯಾಪಕ, ಉತ್ತಮ ನಟ-ನಾಟಕಕಾರ, ಸ್ನೇಹಿತ, ಒಳ್ಳೆಯ ಕುಟುಂಬಪ್ರೇಮಿ.
ಕನ್ನಡ ಸಾಹಿತ್ಯ ಲೋಕಕ್ಕೆ ಸುಮಾರು 126 ಗ್ರಂಥಗಳನ್ನು ನೀಡಿರುವ ಡಾ. ರಾಜೂರ, ‘ಕನ್ನಡ ಸಾಂಗತ್ಯ ಸಾಹಿತ್ಯ’ ಎಂಬ 858 ಪುಟದ ಮಹಾಪ್ರಬಂಧ, 350 ಜನ ಸಾಂಗತ್ಯ ಕವಿಗಳು ಅವರ ಕೃತಿಗಳ ಆಮೂಲಾಗ್ರ ಅಧ್ಯಯನ,. ಗಾತ್ರದಲ್ಲಿ ಮಾತ್ರವಲ್ಲ, ಪಾತ್ರದ ದೃಷ್ಟಿಯಿಂದಲೂ ಮಹತ್ವ ಪಡೆದ ಕೃತಿ.
ಅದೇ ಕಾಲಕ್ಕೆ ಅದೇ ವಿಷಯವನ್ನೊಳಗೊಂಡ ಮಹಾಪ್ರಬಂಧ, ಸಾಂಗತ್ಯ ಪ್ರಕಾರ-ಒಂದು ಅಧ್ಯಯನ..ಹೀಗೆ ರಾಜೂರ ಅವರು ವಚನಸಾಹಿತ್ಯ ಸಂಪಾದನೆಗೆ ಕೊಟ್ಟಿರುವ ಕಾಣಿಕೆ ಅಪೂರ್ವ. ವಿದ್ವಾಂಸ ವೀರಣ್ಣ ರಾಜೂರ ಅವರಿಗೆ ಅರವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಷಷ್ಟ್ಯಬ್ಧಿ ಸಮಾರಂಭದಲ್ಲಿ ಅರ್ಪಿಸಿದ ಅಭಿನಂದನಾ ಗ್ರಂಥವಿದು. ಈ ಕೃತಿಯಲ್ಲಿ ವೀರಣ್ಣ ರಾಜಣ್ಣ ಅವರ ಬಗ್ಗೆ ಸಮಕಾಲೀನ ಸ್ನೇಹಿತರು, ಲೇಖಕರು ಬರೆದಿರುವ ಲೇಖನಗಳು, ವೀರಣ್ಣ ಬದುಕು- ಬರೆಹ ಸೇರಿದಂತೆ ಸಾಹಿತ್ಯ ಕ್ಷೇತ್ರದ ಮಹತ್ವದ ಕಾರ್ಯಗಳನ್ನು ದಾಖಲಿಸಿದ್ದಾರೆ.
©2024 Book Brahma Private Limited.