ಶ್ರೀ ಶಿವರುದ್ರಪ್ಪ ಗುರುಲಿಂಗಪ್ಪ ಮೇಳಕುಂದಿಯವರು ಉಪನ್ಯಾಸಕ, ಪ್ರಾಂಶುಪಾಲ, ಗುಲಬರ್ಗಾ ವಿ.ವಿ. ಸೆನೆಟ್-, ಸಿಂಡಿಕೇಟ್ ಸದಸ್ಯರಾಗಿದ್ವವರು. ಇವರ ಅಭಿನಂದನ ಗ್ರಂಥವೇ ‘ರಚನಾ’. ಡಾ. ಕಲ್ಯಾಣರಾವ ಜಿ. ಪಾಟೀಲ ಸಂಪಾದಕರು. ಡಾ. ಬಸವ ಪಾಟೀಲ ಜಾವಳಿ ಸಹ ಸಂಪಾದಕರು. ‘ಬದುಕು’ ಭಾಗದಲ್ಲಿ ಅಭಿನಂದನೆಗೆ ಅರ್ಹರಾದ ಶ್ರೀ ಎಸ್.ಜಿ. ಮೇಳಕುಂದಿಯವರ ಶಿಷ್ಯರು, ಅವರ ಕುಟುಂಬದ ಸದಸ್ಯರು ಬರೆದಿರುವ 10 ಲೇಖನಗಳಿವೆ, ಮೂರು ಕವನಗಳಿವೆ. ಸ್ವತಃ ಎಸ್.ಜಿ. ಮೇಳಕುಂದಿಯವರು ಬರೆದಿರುವ ನೆನಪಿನಂಗಳದ ಭಾವಬುತ್ತಿಯನ್ನು ಹಿಡಿದಿಡಲಾಗಿದೆ. ಈ ಭಾಗದಲ್ಲಿ ಬಹಳಷ್ಟು ಲೇಖನಗಳು ಸಂಕ್ಷಿಪ್ತವಾಗಿದ್ದರೂ ಹೃದಯವೇದ್ಯವಾಗಿವೆ. ಶ್ರೀಯುತರ ಆತ್ಮೀಯತೆಯನ್ನು, ಸೇವಾ ದಕ್ಷತೆಯನ್ನು ಪ್ರಸ್ತಾಪಿಸುತ್ತವೆ.
ಕಲಬುರ್ಗಿಯ ಪರಿಸರ ವಿಭಾಗದಲ್ಲಿ ಸ್ವಾತಂತ್ರ್ಯ ಹೋರಾಟ, ರಾಜಮನೆತನಗಳ ನಾಡು, ಶೈಕ್ಷಣಿಕ ಸ್ಥಿತಿಗತಿ, ಕೃಷಿ, ಆರ್ಥಿಕಾಭಿವೃದ್ಧಿ, ಸಾಹಿತ್ಯಕ ಹಿರಿಮೆ, ಕಾವ್ಯ, ಕಥೆ, ಕಾದಂಬರಿ, ಆಧುನಿಕ ವಚನ ಸಾಹಿತ್ಯ, ವಿಮರ್ಶೆಗೆ ಸಂಬಂಧಪಟ್ಟ ಲೇಖನಗಳಿವೆ. ‘ಬೆಳಕು’ ವಿಭಾಗದಲ್ಲಿ ವೀರಶೈವ ಯುಗದ ವ್ಯಾಪ್ತಿ, ಭವಿ ಭಕ್ತ ಪರಿಕಲ್ಪನೆ, ಲಿಂಗತತ್ತ್ವ, ಅನುಭವ ಮಂಟಪ ಮತ್ತು ಕಾಯಕ, ಬುದ್ಧ-ಬಸವರ ವೈಚಾರಿಕ ಭೂಮಿಕೆ ಹಾಗೂ ವಚನಕಾರರ ಆರ್ಥಿಕ ದೃಷ್ಟಿ ಕುರಿತಾದ ವಿದ್ವತ್ಪೂರ್ಣ ಲೇಖನಗಳಿವೆ.
©2024 Book Brahma Private Limited.