ಪರಿಮಳದ ಪಡಸಾಲೆ

Author : ವಿವಿಧ ಲೇಖಕರು

Pages 158

₹ 190.00




Year of Publication: 2023
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

‘ಪರಿಮಳದ ಪಡಸಾಲೆ’ ಕೃತಿಯು ಎಸ್. ದಿವಾಕರ್ ಅವರ ಕುರಿತಾದ ಲೇಖನಗಳ ಕೃತಿಯಾಗಿದೆ. ದಿವಾಕರ್‌ ಒಡನಾಟದ ಬಗ್ಗೆ ಕಥೆಗಾರ ಎಂ.ಎಸ್. ಶ್ರೀರಾಮ್‌ ಬರೆದಿರುವ ಸೊಗಸಾದ ಲೇಖನವಿದೆ. ದಿವಾಕರ್ ಕಾವ್ಯದ ಬಗ್ಗೆ ರಾಜೇಂದ್ರ ಚೆನ್ನಿ, ಪ್ರಬಂಧಗಳ ಬಗ್ಗೆ ಎಂಎಸ್‌ ಆಶಾದೇವಿ (M S Ashadevi ), ಕಥೆಗಳ ಬಗ್ಗೆ ಕಥೆಗಾರ ಗುರುಪ್ರಸಾದ ಕಾಗಿನೆಲೆ (Guruprasad Kaginele), ಅನುವಾದಗಳ ಬಗ್ಗೆ ಸುಶೀಲಾ ಪುನೀತಾ ಮತ್ತು ಎನ್‌.ಎ.ಎಂ. ಇಸ್ಮಾಯಿಲ್‌ (N A Mahamed Ismail) ಬರೆದಿರುವ ಸೂಕ್ಷ್ಮ ಒಳನೋಟಗಳ ಆಸಕ್ತಿದಾಯಕ ಲೇಖನಗಳಿವೆ. ಯಶವಂತ ಚಿತ್ತಾಲರು ದಿವಾಕರ್‌ಗೆ ಬರೆದ ಆಪ್ತವಾದ ಪತ್ರವಿದೆ. ಓದುವುದಕ್ಕಿಂತ ಕೇಳುವುದು, ಕೇಳುವುದಕ್ಕಿಂತ ನೋಡುವುದು ಮಜವಾಗಿರುತ್ತದೆ ಎನ್ನುವವರಿಗೂ ಈ ಪುಸ್ತಕದಲ್ಲಿ ಹಲವು ಕವಲುಗಳ ಸಮೃದ್ಧವಾದ ದಾರಿಯಿದೆ. ನಟ, ನಿರ್ದೇಶಕರ ರಮೇಶ ಅರವಿಂದ್‌ (Ramesh Aravind), ನಿರ್ದೇಶಕ ಯೋಗರಾಜ ಭಟ್ (Yogaraj Bhat), ನಟ ಅಚ್ಯುತ್‌ ಕುಮಾರ್, ನಟಿ, ಲೇಖಕಿ ಜಯಲಕ್ಷ್ಮೀ ಪಾಟೀಲ್ (Jayalaxmi Patil), ಗಾಯಕಿ ಸ್ಪರ್ಶಾ ಆರ್‌ ಕೆ. (Sparsha Rk) ಯುವನಟ ನಂದಕುಮಾರ್ ಜಿ.ಕೆ. (Nandakumara G K), ಕತೆಗಾರ್ತಿ ಕಾವ್ಯಾ ಕಡಮೆ ಈ ಎಲ್ಲರ ಧ್ವನಿಗಳು ನಮ್ಮನ್ನು ದಿವಾಕರ್‌ ಜಗತ್ತಿನಲ್ಲಿ ಕೈ ಹಿಡಿದು ಕರೆದುಕೊಂಡು ಹೋಗಲು ಕಾದಿವೆ.ಸ್ವತಃ ಎಸ್‌ ದಿವಾಕರ್ ಧ್ವನಿಯಲ್ಲಿ ಬೇಂದ್ರೆ, ಅಡಿಗ, ಕೆಎಸ್‌ನ, ಶಂಕರ ಮೊಕಾಶೀ ಪುಣೇಕರ್, ಚಂಪಾ, ಚಂದ್ರಶೇಖರ ಪಾಟೀಲ, ಸು.ರಂ. ಎಕ್ಕುಂಡಿ, ಕೆ.ವಿ. ತಿರುಮಲೇಶ್‌, ಎಚ್‌.ಎಸ್. ವೆಂಕಟೇಶಮೂರ್ತಿ (H S Venkatesha Murthy), ಜಯಂತ ಕಾಯ್ಕಿಣಿ, ಪ್ರತಿಭಾ ನಂದಕುಮಾರ್ (Prathibha Nandakumar), ಜ. ನಾ. ತೇಜಶ್ರೀ, (Jana Tejashree), ಆರೀಫ್‌ ರಾಜಾ (Arif Raja) ಅವರ ಪದ್ಯಗಳ ಓದಿವೆ.

About the Author

ವಿವಿಧ ಲೇಖಕರು

. ...

READ MORE

Related Books