ಖ್ಯಾತ ಭಾಷಾ ತಜ್ಞ ಡಾ. ವಿವೇಕ ರೈ ಅವರ ವಿಚಾರಗಳನ್ನು ಒಡನಾಟದ ನೆನಪುಗಳು ಶೀರ್ಷಿಕೆಗಳಡಿ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್ ಅವರು ಸಂಪಾದಿಸಿದ ಕೃತಿ-ವಿವೇಕ ರೈ ಒಡನಾಟದ ನೆನಪುಗಳು. ವಿವೇಕ ರೈ ಅವರ ಶಿಷ್ಯರು, ಸಹೋದ್ಯೋಗಿಗಳು, ಚಿಂತಕ ಅಭಿಮಾನಿಗಳು ಅವರೊಂದಿಗಿನ ಒಡನಾಟಗಳನ್ನು ಸ್ಮರಿಸಿ ಬರೆದ ಲೇಖನಗಳನ್ನು ಇಲ್ಲಿ ಸಂಪಾದಿಸಲಾಗಿದೆ. ವಿವೇಕ ರೈ ಅವರಿಗೆ 76 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಗ್ರಂಥ ಮೂಲಕ ಅಭಿನಂದನೆ ಸಲ್ಲಿಸಲಾಗಿದೆ.
‘ಬಿ ಎ ವಿವೇಕ ರೈ ಒಡನಾಟದ ನೆನಪುಗಳು’ ಕೃತಿಯ ವಿಮರ್ಶೆ
ಜಾನಪದ ಕ್ಷೇತ್ರದ ವಿದ್ವಾಂಸರೂ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಪಾಂಡಿತ್ಯ ಹೊಂದಿರುವವರೂ ಆಗಿರುವ ಡಾ. ಬಿ. ಎ. ವಿವೇಕ ಅವರಿಗೆ 75 ತುಂಬಿದ ಸಂದರ್ಭದಲ್ಲಿ, ಆದರ ಜೀವನವ ಮತ್ತು ಸಾಧನೆಯನ್ನು ನೆನಪಿಸಿಕೊಳ್ಳುವ ಈ ಪುಸ್ತಕವು ಸಿ. ಎನ್.ರಾಮಚಂದ್ರನ್ ಅವರ ಸಂಪಾದಕತ್ವದಲ್ಲಿ ಹೊರ ಬಂದಿದೆ. ವಿವೇಕ ರೈಯವರನ್ನು ಹತ್ತಿರದಿಂದ ಕಂಡ ಐವರು, ತಮ್ಮ ಮತ್ತು ಧೈಯವರ ಒಡನಾಟವನ್ನು ನೆನಪಿಸಿಕೊಂಡು ಬರೆದ ಐದು ಲೇಖನಗಳು ಇಲ್ಲಿವೆ. ಆ ಓಡನಾಟದ ನೆನಪುಗಳನ್ನು ಮೂಲಕ, ರೈಯವರು ಕನ್ನಡ ಮತ್ತು ತುಳು ಭಾಷೆಗಳಿಗೆ ನೀಡಿದ ಸಾಂಸ್ಕೃತಿಕ ಕೊಡುಗೆ ಯನ್ನು ಓದುಗರು ಮನನ ಮಾಡಿಕೊಳ್ಳಬಹುದು. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ದ್ದಾಗ ಹಲವು ಸಂಶೋಧನೆಗಳಿಗೆ ಮತ್ತು ಗ್ರಂಥ ಪ್ರಕಟಣೆಗೆ ರೈಯವರು ಶ್ರಮಿಸಿದ ವಿಧಾನ ಅನನ್ಯ, ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದೊಂದಿಗೆ ಆರಂಭದಿಂದಲೂ ತೊಡಗಿಸಿಕೊಂಡಿದ್ದ ರೈಯ ವರು, ಶ್ರಮಿಸಿದ ವಿಧಾನ ಅಗತ್ಯ ಅಲ್ಲಿನ ಪ್ರಸಾರಂಗದ ಸ್ಥಾಪಕ ನಿರ್ದೇಶಕರೂ ಆಗಿದ್ದರು. ತುಳು ಜನಪದ ಸಾಹಿತ್ಯದ ಅಧ್ಯಯನದಲ್ಲಿ ಅವರ ಕೊಡುಗೆ ಮಹತ್ತರ ಈ ಪುಸ್ತಕದಲ್ಲಿ ಅವರ ಒಡನಾಟವನ್ನು ನೆನಪಿಸಿಕೊಂಡ ಕಾಮ ಸಿ.ಎಸ್.ರಾಮಚಂದ್ರನ್, ಪುರುಷೋತ್ತಮ ಬಿಳಿಮಲೆ, ಚಿನ್ನಪ್ಪ ಗೌಡ, ಹೀ. ಚಿ.ಬೋರಲಿಂಗಯ್ಯ ಮತ್ತು ಹೈಡ್ರುನ್ ಜೂಟ್‌ನರ್ ಒಡನಾಡಿಗಳ ನೆನಪುಗಳ ಮೂಲಕ ಸಾಧಕರೊಬ್ಬರನ್ನು ಸಮರ್ಥವಾಗಿ ಪರಿಚಯಿಸಿ ಕೊಡುವ ಹೊಸ ವಿಧಾನ ಈ ಪ್ರಸಕದಲ್ಲಿ ರೂಪುಗೊಂಡಿದೆ. ಈ ಪುಸ್ತಕ ಮುದ್ರಣದ ಗುಣಮಟ್ಟ, ಮುಖಪುಟದ ವಿನ್ಯಾಸ(ಅಪಾರ)ಬಹು ಸುಂದರ, ಸಂಗ್ರಹಯೋಗ್ಯ.
(ಕೃಪೆ: ವಿಶ್ವವಾಣಿ)
©2024 Book Brahma Private Limited.