‘ಮಡುಗಟ್ಟಿ ಅಕ್ಕರೆ ’ ಕಾಳೇಗೌಡ ನಾಗವಾರ ಅವರಿಗೆ ಸಲ್ಲಿಸಿದ ಗೌರವ ಗ್ರಂಥ. ಜಿ.ವಿ ಆನಂದಮೂರ್ತಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯವಾಹಿನಿಯ ದಿಕ್ಕುದೆಸೆಗಳನ್ನು ಗುಣಾತ್ಮಕವಾಗಿ ಬದಲಿಸಿದ ಚಳವಳಿಗಳ 'ಸಾಲಿನಲ್ಲಿ ಬಂಡಾಯಕ್ಕೆ ಮಹತ್ವಪೂರ್ಣಸ್ಥಾನವಿದೆ. ಇಂತಹ ಚಳವಳಿಗಳನ್ನು ಕಟ್ಟುವ ಸಂದರ್ಭದಲ್ಲಿನ ಸಾಂಸ್ಕೃತಿಕ ಏಳುಬೀಳುಗಳ ಸವಿವರ ಚಿತ್ರಣ ಇಲ್ಲಿನ ಬಹುಪಾಲು ಬರೆಹಗಳಲ್ಲಿ ದೊರೆಯುತ್ತದೆ. ಬಂಡಾಯ ಚಳವಳಿಯ ಚಾರಿತ್ರಿಕ ಔನ್ನತ್ಯವನ್ನು ಎತ್ತಿಹಿಡಿಯುವ ಸಂಬಂಧದಲ್ಲಿ ಕೂಡ ಇಲ್ಲಿನ ಬರಹಗಳು ಅತ್ಯಪೂರ್ವ ಮಾಹಿತಿಯನ್ನು ಒದಗಿಸಿಕೊಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಚಳವಳಿಗಳನ್ನು ಕಟ್ಟುವಾಗ, ಪ್ರಗತಿಪರ ಚಿಂತನೆಗಳನ್ನು ಬಿತ್ತುವಾಗ, ಜನಸಾಮಾನ್ಯರ ನಡುವೆ ಓಡಾಡುವಾಗ, ಸತ್ವಶೀಲ ವಿದ್ಯಾರ್ಥಿಪಡೆ ನಿರ್ಮಾಣ ಮಾಡುವಾಗ ಕಾಳೇಗೌಡರು ನಡೆದುಕೊಂಡ ರೀತಿ ಹಾಗೂ ಹಂಚುಂಡ ಪ್ರೀತಿ ಮತ್ತು ನಿರ್ಭೀತಿಯ ಅಮೃತಕ್ಷಣಗಳು ಇಲ್ಲಿ ಧಂಡಿಯಾಗಿ ಸಿಗುತ್ತವೆ. ಕಾಳೇಗೌಡ ನಾಗವಾರರ ತುಂಬು ಘನತೆಯ ವ್ಯಕ್ತಿತ್ವವನ್ನು ಕುರಿತ ಇಲ್ಲಿನ ಬರೆಹಗಳಲ್ಲಿ ಕಳೆದ ಮೂರು ದಶಕಗಳ ಅವಧಿಯ ಚಾರಿತ್ರಿಕ ಸ್ಥಿತ್ಯಂತರಗಳ ಅನನ್ಯಾವಲೋಕನವನ್ನು ನಾವು ಕಾಣಬಹುದು.
©2024 Book Brahma Private Limited.