‘ಲಾಲಿಪಾಪು ಚೀಪು ಚೀಪು’ ಕೃತಿಯು ಎಚ್. ಡುಂಡಿರಾಜ್ ಅವರ ಮಕ್ಕಳ ಕವಿತೆಗಳಾಗಿವೆ. ಕೃತಿಗೆ ಬೆನ್ನುಡಿ ಬರೆದಿರುವ ಎಚ್. ಎಸ್. ವೆಂಕಟೇಶಮೂರ್ತಿ ಅವರು, ‘ಮಕ್ಕಳ ಕವಿತೆಗಳು, ಹಿರಿಯರ ಚಾಟೂಕ್ತಿಗಳು, ಅನುಭವಿಗಳ ಜಾಣ್ಣುಡಿಗಳು, ರಸಿಕರ ನಾದಮಯ ಫಲುಕುಗಳು, ಭಾವುಕರ ರಸೋದ್ಗಾರಗಳು, ನಮ್ಮ ಹಳ್ಳಿಯ ಬದಿಯಲ್ಲೇ ಬಿದ್ದಿರುವ, ನಡೆದರೆ ನಮ್ಮನ್ನು ನಮ್ಮ ನಮ್ಮ ಘನವಾದ ಗಂತವ್ಯಕ್ಕೆ ಕೊಂಡೊಯ್ಯುವ ದಾರಿ ದಿವ್ಯಗಳು. ಡುಂಡಿಯವರ ಕಾವ್ಯದ ಅನನ್ಯತೆ ಆ ಬಗೆಯದು. ಮೊಗೇರಿ, ಸಾಧನಕೇರಿ, ಕುಪ್ಪಳಿ, ಮೇಲುಕೋಟೆಗೆ ನಮಗೆ ದಾರಿ ತೋರಿಸುವ ನಮ್ಮೂರ ಪಕ್ಕದಲ್ಲೇ ಇರುವ ಕೈಗಂಬದ ಹಾಗೆ ಡುಂಡಿಯವರ ಕವಿತೆಗಳು ನಮ್ಮ ಭಾಷೆಯ ಅಲೌಕಿಕತೆಯ ಬಗ್ಗೆ ನಮ್ಮನ್ನು ಆಕರ್ಷಿಸಿ ತಾಯ್ನುಡಿಯ ಪವಿತ್ರ ನೆಲೆಗೆ ಕೈಮರವಾಗುವರೋ ಹಾಗೇ ಡುಂಡಿರಾಜರೂ ನಮ್ಮನ್ನು ತಮ್ಮ ಸೀಳ್ನೋಟಗಳಿಂದ ಸೆಳೆಯುವ ಕವಿಯಾಗಿದ್ದಾರೆ' ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.