ಗುರುಗೌರವ

Author : ಪಾದೇಕಲ್ಲು ವಿಷ್ಣು ಭಟ್ಟ

₹ 500.00

Synopsys

ಪಾದೇಕಲ್ಲು ವಿಷ್ಣು ಭಟ್‌ ಮತ್ತು ಮುಳಿಯ ಶಂಕರ ಭಟ್ಟ ಅವರ ಸಂಪಾದಿತ ಕೃತಜ್ಞತಾ ಕೃತಿ ʻಗುರುಗೌರವʼ. ಪಂಜಜೆ ಶಂಕರ ಭಟ್ಟ ಅವರ ಪರಿಚಯಮಾಡುವ ಈ ಪುಸ್ತಕವು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಗೌರವಗ್ರಂಥದ ರೂಪದಲ್ಲಿ ಬಿಡುಗಡೆಯಾಗಿದೆ. ಶಂಕರ ಭಟ್ಟ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಭಾಷಾ ಪಂಡಿತರು. ಶಿಕ್ಷಕರಾಗಿ ಭಾಷೆ, ವಿದ್ಯಾರ್ಥಿಗಳ, ನಾಡಿನ ವಿಕಸನಕ್ಕೆ ಕಾರಣರಾದವರು. ಬಹುಭಾಷೆಗಳ ನಾಡಾದ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಮಾತೃಭಾಷೆಯ ಜೊತೆ ಕನ್ನಡ ಭಾಷೆಯನ್ನು ಕಲಿಯಲು ಮತ್ತು ಗೌರವಿಸಲು ಸಹಕಾರಿಯಾಗುವ ವಾತಾವರಣವನ್ನು ನಿರ್ಮಿಸಿ, ಕಲಿಕೆಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದಾದ್ದಾರೆ. ಭಾಷಾ ಪ್ರೀತಿಯ ಕಾಯಕದೊಂದಿಗೆ ಕೃಷಿ ಪ್ರತಿಕೋದ್ಯಮ, ಅನುವಾದ, ಪ್ರಕಾಶನ, ಮಕ್ಕಳ-ಶಿಕ್ಷಣ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದರು. ಹೀಗೆ ಪಂಜಜೆ ಶಂಕರ ಭಟ್ಟ ಅವರು ಬೆಳೆದು ಬಂದ ಬಗೆ, ಅವರ ಕೊಡುಗೆಗಳು ಹಾಗೂ ನಾಡಿನ ಜನಪ್ರಿಯ ಶಿಕ್ಷಕರಲ್ಲೊಬ್ಬರಾದ ಕುರಿತು ಈ ಕೃತಿಯು ಹೇಳುತ್ತದೆ.

About the Author

ಪಾದೇಕಲ್ಲು ವಿಷ್ಣು ಭಟ್ಟ
(06 February 1956)

ಪಾದೇಕಲ್ಲು ವಿಷ್ಣು ಭಟ್ಟ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ 06-02-1956 ರಂದು ಜನಿಸಿದರು. ಇವರ ತಂದೆ ಶ್ರೀ ಪಾದೇಕಲ್ಲು ನಾರಾಯಣ ಭಟ್ಟ, ತಾಯಿ ಶ್ರೀಮತಿ ಶಾರದಾ. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮಸ್ಥಾನದಲ್ಲಿ ಎಂ.ಎ ಪದವಿ ಪಡೆದರು. ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದರು. ನಂತರ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ...

READ MORE

Related Books