ದೇಶಕೋಶ

Author : ಕೆ.ಎಸ್. ದೇಶಪಾಂಡೆ

Pages 416

₹ 330.00




Year of Publication: 2013
Published by: ಸುಂದರ ಪುಸ್ತಕ ಪ್ರಕಾಶನ
Address: ಸುಂದರ ಪುಸ್ತಕ ಪ್ರಕಾಶನ, #79, ಚಂದ್ರಕಿರಣ, ಎರಡನೇ ತಿರುವು,ಎರಡನೆಯ ಮುಖ್ಯರಸ್ತೆ, ಶಕ್ತಿನಗರ, ಧಾರವಾಡ-580004
Phone: 9448556458

Synopsys

ದೇಶಕೋಶ- ಕರ್ನಾಟಕದ ಪ್ರಸಿದ್ಧ ಗ್ರಂಥಾಲಯ ವಿಜ್ಞಾನಿ, ಗ್ರಂಥಪಾಲ ಪ್ರೊ.ಕೆ.ಎಸ್.ದೇಶಪಾಂಡೆಯವರ ಲೇಖನಗಳ ಸಂಗ್ರಹ. ದೇಶಪಾಂಡೆಯವರು ಕೋಶಪಾಂಡೆ ಎಂದೇ ಹೆಸರಾದಂತವರು.

ತಮ್ಮ ಇಡೀ ಬದುಕನ್ನು ಗ್ರಂಥಗಳು ಹಾಗೂ ಗ್ರಂಥಾಲಯಗಳ ಸಹವಾಸದಲ್ಲಿಯೇ ಸವೆಸಿದವರು.ಇದೇ ಕಾರಣಕ್ಕಾಗಿ ದೇಶ-ವಿದೇಶಗಳನ್ನು ಸುತ್ತಿದವರು, ಆದ್ದರಿಂದ ಅವರ ಲೇಖನಗಳ ಸಂಕಲನಕ್ಕೆ ದೇಶಕೋಶ ಎಂಬ ಹೆಸರಿಡಲಾಗಿದೆ. ವೈಚಾರಿಕ ಬರಹಗಳು, ಬೌದ್ಧಿಕ ವಿಕಾಸಕ್ಕೆ ಪೂರಕವೆನಿಸುವ ಬರಹಗಳೊಂದಿಗೆ ಅವರು ಬರೆದ ಬಹುಪಾಲು ಕೃತಿಗಳು ಗ್ರಂಥಾಲಯಗಳು ಮತ್ತು ಗ್ರಂಥವಿಜ್ಞಾನಕ್ಕೆ ಸಂಬಂಧಿಸಿದವು. 

About the Author

ಕೆ.ಎಸ್. ದೇಶಪಾಂಡೆ
(05 May 1924 - 04 August 2018)

'ಸೌಮಿತ್ರಿ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಕೆ.ಎಸ್. ದೇಶಪಾಂಡೆ ಅವರು ಮೂಲತಃ ಧಾರವಾಡದವರು. ತಂದೆ ಶ್ರೀಪಾದರಾಮಚಂದ್ರ, ತಾಯಿ ರಾಧಾಬಾಯಿ. ಗ್ರಂಥಾಲಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ದೇಶಪಾಂಡೆ ಅವರಯ ಗ್ರಂಥಾಲಯಗಳ ಬಗ್ಗೆ ಉಪಯುಕ್ತ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಧಾರವಾಡದಲ್ಲಿ 95ನೇ ವಯಸ್ಸಿನಲ್ಲಿ ನಿಧನರಾದರು. ಭಾರತದಲ್ಲಿ ಗ್ರಂಥಾಲಯ ಪ್ರಸಾರ, ಗ್ರಂಥೀಯ ಒಂದು ಅಧ್ಯಯನ, ಕನ್ನಡ ಗ್ರಂಥಸೂಚಿ (ಸಂಪಾದನೆ- ಇತರರೊಡನೆ) ಪ್ರಕಟಿತ ಕೃತಿಗಳು. ...

READ MORE

Related Books