ಚದುರಂಗ ವ್ಯಕ್ತಿ-ಅಭಿವ್ಯಕ್ತಿ

Author : ಡಿ.ಎ. ಶಂಕರ್

Pages 423

₹ 100.00




Year of Publication: 1988
Published by: ಐಬಿಎಚ್ ಪ್ರಕಾಶನ
Address: ಗಾಂಧಿನಗರ, ಬೆಂಗಳೂರು- 560009

Synopsys

‘ಚದುರಂಗ ವ್ಯಕ್ತಿ-ಅಭಿವ್ಯಕ್ತಿ ’ ಹೆಸರಾಂತ ಲೇಖಕ ಚದುರಂಗ ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ. ಚದುರಂಗ ಎನ್ನುವ ಹೆಸರಿನಲ್ಲಿ ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿ ಸಣ್ಣಕತೆ, ನಾಟಕ, ಕಾದಂಬರಿಗಳನ್ನು ಬರೆದಿರುವ ಮುದ್ದ ರಾಜೇ ಅರಸ್ ಸುಬ್ರಹ್ಮಣ್ಯರಾಜೇ ಅರಸು, ( ಎಂ. ಸುಬ್ರಹ್ಮಣ್ಯರಾಜೇ ಅರಸ್) ಇಡೀ ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಅನನ್ಯರಾದ ಬರಹಗಾರರು. ಈ ಕೃತಿಯ ಚದುರಂಗ ಅವರ ಬದುಕು -ಬರಹಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಲ್ಲಿ ಸಮಕಾಲೀನ ಸಾಹಿತಿಗಳು ಚದುರಂಗ ಅವರ ಕುರಿತಾಗಿ ಮತ್ತು ಅವರ ಸಾಹಿತ್ಯ ಕೃತಿಗಳ ಕುರಿತಾಗಿ ಬರೆದಿರುವ ಮಹತ್ವದ ಬರಹಗಳಿವೆ.

About the Author

ಡಿ.ಎ. ಶಂಕರ್

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಡಿ.ಎ. ಶಂಕರ ಅವರು ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.  ನಂತರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಅವರು ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಎಮರಿಟಸ್ ಪ್ರೊಫೆಸರ್ ಆದವರು. ಕಾವ್ಯ, ಅನುವಾದ, ವಿಮರ್ಶೆ ಹಾಗೂ ನಾಟಕ ಹೀಗೆ ವಿವಿಧ ಪ್ರಕಾರಗಳಲ್ಲಿ ಶಂಕರ್ ಅವರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್‌ನ ಫೀಲ್ಡ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪಡೆದ ಅವರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿಯ ಫೆಲೋ ಆಗಿದ್ದರು. ಹಾಗೆಯೇ, ಕೆನಡಾದ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಫೆಲೋಶಿಪ್‌ನಲ್ಲಿ ಕಾರ್ಯನಿರ್ವಹಿಸಿದ್ದವರು. ಬೆಳಕಿನ ಮರ, ನಿಮ್ಮಲ್ಲೊಬ್ಬ, ಪವಾಡ  ಅವರ ...

READ MORE

Related Books