ಪ್ರಸ್ತತ ‘ಬಕಾಸುರನ ಹೊಟ್ಟೆ’ ನನ್ನ ಐದನೆಯ ಕವನ ಸಂಕಲನ. ಮಕ್ಕಳಿಗಾಗಿ ಪದ್ಯ ಬರೆಯುವುದರೆಂದರೆ ನನಗೆ ಬಹಳ ಇಷ್ಟ. ಅಧ್ಯಾಪಕನಾದ ನನ್ನ ಎದೆಯಾಳದಲ್ಲಿ ಸಹಜವಾಗಿ ಮೂಡಿಬರುವ ಕವಿತೆಗಳು ಪದ್ಯಗಳಾಗಿ ಮೂಡಿಬರುತ್ತವೆ. ಕಳೆದ ನಾಲ್ಕು ಸಂಕಲನಗಳಾದ ‘ಬಣ್ಣದ ಚಿಟ್ಟೆ’, ‘ಮಕ್ಕಳ ಮಂದಾರ’, ‘ಜಂಗಮ ಜೋಗಿ’, ‘ಕಂದನ ಕವಿತೆ’ಗಳಿಗಿಂತ ಭಿನ್ನವಾಗಿರಲೆಂದು ಈ ಸಂಕಲನಕ್ಕೆ ಹೆಚ್ಚಾಗಿ ಕಥನ ಕವನಗಳನ್ನು ಸರಳವಾದ ಪದ್ಯಗಳನ್ನಾಗಿ ಮಾಡಿ ತಮ್ಮ ಮುಂದಿಟ್ಟಿದ್ದೇನೆ. ಇನ್ನಷ್ಟು ಈ ಬಗೆಯ ಪದ್ಯಗಳು ಮುಂದಿನ ‘ ಪದ್ಯ ಹೇಳುವ ಮರ’ ಸಂಕಲನದಲ್ಲಿ ಅಳವಡಿಸಲಿದ್ದೇನೆ. ‘ಕವಿತೆಯು ಮಕ್ಕಳನ್ನು ತಲುಪುವುದರೊಂದಿಗೆ ಅವರ ಮನೋವಿಕಾಸಕ್ಕೆ ಕಾರಣವಾಗಬೇಕು’ ಎಂಬ ಆಶಯದೊಂದಿಗೆ ಪ್ರಕಟಿಸಿರುವ ಈ ಕವನ ಸಂಕಲನ ಮಕ್ಕಳಿಗಲ್ಲದೆ ಹಿರಿಯರಿಗೂ ಹಿತವಾಗುವುದೆಂದು ಭಾವಿಸಿದ್ದೇನೆ.ಇದನ್ನು ಹೇಗೆ ಸ್ವೀಕರಿಸುತ್ತೀರೋ ಅದು ನಿಮಗೆ ಬಿಟ್ಟಿದ್ದು.ಏಕೆಂದರೆ ಬರೆದಾದ ಮೇಲೆ ಅದು ನನ್ನದಲ್ಲ, ನಿಮ್ಮದು ಮತ್ತು ಸಮುದಾಯದ್ದು. ನನ್ನ ಕವಿತೆಗಳನ್ನು ಓದಿ ಖುಷಿ ಪಡುವ ಕನ್ನಡದ ಕಂದಮ್ಮಗಳಿಗೆ ಹಾಗೂ ಅವುಗಳನ್ನು ಮಕ್ಕಳಿಗೆ ಕೊಡಿಸಿ ಓದಲು ಪ್ರೇರೇಪಿಸುತ್ತಿರುವ ತಂದೆ ತಾಯಿಯರಿಗೆ ನನ್ನ ಮೊದಲ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
©2024 Book Brahma Private Limited.