`ಬಾಳಲೋಕ’ ಡಾ. ಬಾಳಾಸಾಹೇಬ ಲೋಕಾಪುರ ಅವರ ಅಭಿನಂದನ ಗ್ರಂಥವಾಗಿದೆ. ಗುರುಪಾದ ಮರಿಗುದ್ದಿ ಹಾಗೂ ವಿಜಯಕುಮಾರ ಕಟಗಿಹಳ್ಳಿಮಠ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. 'ಬಾಳಲೋಕ'ದಲ್ಲಿ ಮೂರು ಭಾಗಗಳಿವೆ. ಕನ್ನಡ ಕಥನ ಪರಂಪರೆಯ ಸ್ಕೂಲ ಪರಿಚಯ ಮಾಡಿಕೊಡುವ ಸಲುವಾಗಿ ಮೊದಲ ಭಾಗದಲ್ಲಿ ಹದಿನಾಲ್ಕು ಲೇಖನಗಳು ಸಂಕಲಿತವಾಗಿವೆ. ಜನಪದ ಕಥೆಗಳಿಂದ ಹಿಡಿದು ಆಧುನಿಕ ಸಣ್ಣ ಕತೆಗಳವರೆಗಿನ ಪ್ರಮುಖ ಪ್ರಯೋಗಗಳನ್ನು ಲೇಖಕರು ಅಧ್ಯಯನಪೂರ್ಣ ಶ್ರಮಪೂರ್ಣ ಲೇಖನಗಳಿಂದ ಎದುರಿಗಿಟ್ಟಿದ್ದಾರೆ. ಶಾಸನ, ಹರಿದಾಸರ, ಚಾರಣ ಕವಿಗಳ ಕಥನ ಮಾದರಿಗಳನ್ನು ಸೇರಿಸಲು ಪ್ರಯತ್ನ ಪಟ್ಟರೂ, ಲೇಖಕರ ಸೂಕ್ತ ಸ್ಪಂದನೆ ಸಾಧ್ಯವಾಗದೆ, ಅವು ಇಲ್ಲಿ ಸೇರಿಲ್ಲ ಎಂಬುದನ್ನೂ ನಾವು ಇಲ್ಲಿ ದಾಖಲಿಸಬೇಕಿದೆ. ಸಮಾಧಾನದ ಅಂಶವೆಂದರೆ, ನಮ್ಮ ವಿನಂತಿಯನ್ನು ಮಾನ್ಯಮಾಡಿ ಲೇಖನ ಬರೆದು ಕಳಿಸಿದ ಲೇಖಕರ ಲೇಖನಗಳು ಮುಂದೆ ಅಧ್ಯಯನಕ್ಕೆ ಆಕರಗಳಾಗಿ ನಿಲ್ಲುವಂತಿವೆ. ಅದರಂತೆ ಡಾ. ಲೋಕಾಪುರರ ಕೃತಿಗಳ ಬಗೆಗೆ ವಿಮರ್ಶಾ ಲೇಖನಗಳು ಎರಡನೆಯ ಭಾಗದಲ್ಲಿವೆ. ಇವುಗಳಿಂದ ಅವರ ಕೃತಿಗಳ ಪ್ರವೇಶಕ್ಕೆ ಅನುಕೂಲವಾಗುತ್ತದೆ ಎಂಬ ಭರವಸೆ ನಮಗಿದೆ. ಈ ಎರಡೂ ಭಾಗಗಳಲ್ಲಿಯ ಲೇಖನಗಳು ಅಧ್ಯಯನಶೀಲರಿಗೆ, ಸಂಶೋಧಕರಿಗೆ, ವಿಮರ್ಶಕರಿಗೆ ಆಕರವಾಗಬೇಕು ಎಂಬ ಯೋಚನೆ ನಮಗೆ ಇತ್ತು, ಅದು ಇಲ್ಲಿ ಸಾಧ್ಯವಾಗಿದೆ. ಮೂರನೆಯ ಭಾಗದಲ್ಲಿ ಡಾ. ಲೋಕಾಪುರರ ಬಾಲ್ಯ, ತಾರುಣ್ಯ ಕಾಲದ ಆತ್ಮಕಥನ ವಿವರ ಭಾಗಶಃ ಬಂದಿದೆ.
©2024 Book Brahma Private Limited.