‘ಅಸ್ಪೃಶ್ಯ’ ಕೃತಿಯು ಮುಲ್ಕ್ ರಾಜ್ ಆನಂದ್ ಅವರ ಕಾದಂಬರಿಯಾಗಿದ್ದು, ಡಿ. ಎ ಶಂಕರ್ ಅವರು ಕನ್ನಡಕ್ಕೆ ಅನುವಾದಗೊಳಿಸಿದ್ದಾರೆ. ಈ ಕೃತಿಯು ಕೇವಲ ಕನ್ನಡ ಜನರ ಅಥವಾ ಭಾರತೀಯರ ಪ್ರಜ್ಞೆಯನ್ನು ಮಾತ್ರ ಜಾಗೃತಗೊಳಿಸದೇ ಇಡೀ ವಿಶ್ವದಲ್ಲೇ ಎಲ್ಲ ತಳಸಮುದಾಯದ ಬಗ್ಗೆ ಹೊಸತೊಂದು ಮಾನವೀಯ ಹರಿವನ್ನು ಸೃಷ್ಟಿಸಿ, ವಿಶ್ವಸಾಹಿತ್ಯಕ್ಕೆ ಒಂದು ಅಪೂರ್ವ ಕಾಣಿಕೆಯಾಗಿದೆ. ಗಾಂಧೀಜಿಯವರು ಕಾದಂಬರಿಯನ್ನು ಹಸ್ತಪ್ರತಿಯಲ್ಲಿ ಓದಿಸಿ ಕೇಳಿದ್ದು, ಅದರ ಸಂಸ್ಕರಣೆಯಲ್ಲಿ ಸಹಾಯಕರಾದದ್ದು, ಅನಂತರ ಇದು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಬೆಳಕು ಕಂಡಿದ್ದು- ಈ ಎಲ್ಲ ಸಾಹಿತ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಗತಿಗಳು. ಅಸ್ಪೃಶ್ಯ ಹುಡುಗನೊಬ್ಬನ ಎಚ್ಚರದ ಕಣ್ಣಿನಿಂದ ನಮ್ಮ ಜಾತಿ ವ್ಯವಸ್ಥೆಯ ಅಮಾನವೀಯತೆಯನ್ನು ನಿಷ್ಟುರವಾಗಿ ಬಯಲು ಮಾಡುವಂತಹ ಬರಹವನ್ನು ಈ ಕೃತಿ ಒಳಗೊಂಡಿದೆ. ಇಂದಿನ ಇಡೀ ಭಾರತದ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಯ ಯಥಾವತ್ತಾದ ಪ್ರತಿಬಿಂಬ ಮತ್ತೆ ಅದರ ಮೇಲಣ ಮಾನವೀಯ ಭಾಷ್ಯವೆಂದು ಲೇಖಕರು ಈ ಕೃತಿಯನ್ನು ಕರೆದಿದ್ದಾರೆ.
©2024 Book Brahma Private Limited.