ಕೋಲಾರ ಜಿಲ್ಲೆಯ ಚಿಂತಾಮಣಿಯವರು. (ಜನನ: 10-09-1937 )ತಂದೆ ಬಿ.ಕೆ. ಗುರುರಾವ್, ತಾಯಿ ಕೃಷ್ಣವೇಣಿ ಬಾಯಿ. ಚಿನ್ನದಗಣಿಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಾಲೆ ವೇಮಗಲ್, ಮತ್ತು ಕೋಲಾರದಲ್ಲಿ ಪ್ರೌಢಶಾಲೆಯ ನಂತರ ಮೈಸೂರು ಮುಕ್ತವಿಶ್ವವಿದ್ಯಾಲಯದಿಂದ ಎಂ.ಎ. (ಜಾನಪದ ಐಚ್ಛಿಕ) ಪದವಿ. ಕುಂದಾಪುರದಲ್ಲಿ ಕೃಷಿ ಇಲಾಖೆಯಲ್ಲಿ ಉದ್ಯೋಗ. ಸದ್ಯ ನಿವೃತ್ತಿ. ಇವರ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಹಲವಾರು ತೆಲುಗು ಕತೆಗಳನ್ನೂ ಅನುವಾದಿಸಿದ್ದಾರೆ. ಕಥೆಗಳು ಆಕಾಶವಾಣಿ, ದೂರದರ್ಶನ ಜಾಲಗಳಲ್ಲಿಯೂ ಪ್ರಸಾರವಾಗಿವೆ.ಮಯೂರ ಪ್ರಕಾಶನ ಆರಂಬಿಸಿದ್ದು, ನಂತರ ನಂತರ ಸಮಾನ ಮನಸ್ಕರೊಡನೆ ಕಲಾಮಯೂರಿ ಪ್ರಕಾಶನ ನಡೆಸಿದರು.
ಪ್ರೇಮದ ಬಾಳು, ಒಲವಿನ ಒಸರು, ಹೃದಯವೀಣೆ, ದೇವರಿಲ್ಲದ ಗುಡಿ, ವಸಂತ ದಹನ, ನಿಯತ್ತಿನ ನೇಣು, ಶರಶಯ್ಯೆ, ಪ್ರೇಮಪತಂಗ, ಸೀಮಂತ, ತಾಳಮೇಳ, ಕಥಾನಾಯಕಿ, ಗುಮ್ಮನ ಕರೆಯದಿರೆ-ಇವು ಕಾದಂಬರಿಗಳು.
ಕಥಾಸಂಕಲನಗಳು-ಲವ್ ಇನ್ ನಂದಿ, ಬುದ್ಧನದೇ ಚಿಂತೆ, ಶೈಲಾ ಟೀಚರ್, ಮುನಿಯನ ಮನವಿ, ಭೂಕಂಪ ಇತ್ಯಾದಿ, ಯಜ್ಞಪಶು, ಆಹುತಿ, ಮುಗಿಯದ ನಾಟಕ, ಅಪಹೃತ, ಹೆಳವನ ಹೆಗಲೇರಿದ ಕುರುಡ -ಇವು ನಾಟಕಗಳು. ಶ್ರೀರಾಘವೇಂದ್ರ ಸ್ವಾಮಿಗಳನ್ನೂ ಕುರಿತು ಬರೆದ ‘ಗುರುದಕ್ಷಿಣೆ’ ಮತ್ತು ಮಹಾಭಾರತದ ವಸ್ತುನಿಷ್ಠ ಅಧ್ಯಯನದ ಕೃತಿ ‘ಸರಳಭಾರತ’. ಇವರಿಗೆ ರತ್ನಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಅತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ರಾಜಕುಮಾರ್ ಅಭಿಮಾನಿಗಳ ಸಂಘ, ಅಂಬರೀಶ್ ಅಭಿಮಾನಿಗಳ ಸಂಘ, ಕೃಷಿ ಇಲಾಖೆ ಹೀಗೆ ಸನ್ಮಾನಗಳು ಲಭಿಸಿವೆ.