ಸದಾನಂದ ಎನ್. ಪಾಟೀಲರ ಕಾರ್ಯಕ್ಷೇತ್ರ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಜೇವರಗಿ. ತಂದೆ ನಾನಾಗೌಡ ಪಾಟೀಲ, ತಾಯಿ ಶ್ರೀಮತಿ ಮಲ್ಲಮ್ಮ ಎನ್. ಪಾಟೀಲ. ಎಂ.ಎಸ್‌ಸಿ, ಎಂ.ಇಡಿ ಪದವಿಯನ್ನು ಪಡೆದುಕೊಂಡು, ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರಾಗಿ ಸೇವೆ ಆರಂಭಿಸಿ, ಪ್ರೌಢ ಶಾಲೆಯ ಮೂಖ್ಯೋಪಾಧ್ಯಾಯರಾಗಿ, ಶಿಕ್ಷಕರ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸುಮಾರು ಎರಡು ದಶಕಗಳ ಕಾಲ ಶೈಕ್ಷಣಿಕ ರಂಗದಲ್ಲಿ ಸೇವೆ. ಇದರೊಂದಿಗೆ ಶ್ರೀ ಬಸವ ಭೂಷಣ ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟು ಹಾಕಿ ಕನ್ನಡ ಸಾಹಿತ್ಯದಲ್ಲಿ ಇಲ್ಲಿಯವರೆಗೆ “ಕಿರಣ” ಕವನ ಸಂಕಲನ, “ಜೇವರ್ಗಿ ತಾಲೂಕ ದರ್ಶನ,” “ಕಲ್ಯಾಣ ಕದಳಿ,” “ಬದುಕಲು ಕಲಿಯೋಣ” “ಸಾಧಿಸಿದವರ ಸಾಧನೆಗಳ ಕಥೆಗಳು,” “ಬ್ಯುಟಿಫುಲ್ ಲೈಫ್” ಸೇರಿದಂತೆ 15 ವಿವಿಧ ಪ್ರಕಾರದ ಕೃತಿಗಳನ್ನು ರಚಿಸಿಲಾಗಿದೆ.
ವಿದ್ಯಾನಗರ ಯುವ ತರುಣ ಸಂಘದ ಅಧ್ಯಕ್ಷರಾಗಿ ಅನೇಕ ಸಾಮಾಜಿಕ ಕಾರ್ಯಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಜೇವರ್ಗಿ ತಾಲೂಕಿನ ಬಸವ ಕೇಂದ್ರ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಹಾಗೂ ವಚನ ಸಾಹಿತ್ಯ ಪ್ರಸಾರಕ್ಕಾಗಿ ನೀರಂತರ ಸೇವೆ ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದಿಂದ “ಶಿಕ್ಷಕ ರತ್ನ" ಪ್ರಶಸ್ತಿ ಮತ್ತು ಅಥಣಿ ಮೊಟಗಿ ಮಠದ ”ಅಥಣಿತ ಅಂಕಿತ" ಪುಸ್ತಕ ಪ್ರಶಸ್ತಿ ಮೊದಲಗೊಂಡು ಹತ್ತು ಹಲವು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಲಬುರಗಿ ಜಿಲ್ಲೆಯ ರೈತರು ಅನ್ಯಾಯಕ್ಕೊಳಗಾದಾಗ, ಸಂಕಷ್ಟಕದಲ್ಲಿ ಸಿಲಿಕಿಕೊಂಡಾಗ ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರೊಂದಿಗೆ ಅನೇಕ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ, ಧರಣಿ ಸತ್ಯಾಗ್ರಹ, ರಸ್ತೆ ತಡೆ, ಪಾದಯಾತ್ರೆಯಲ್ಲಿ ಭಾಗಿಯಾಗಿ ಹೊರಾಟದ ದ್ವನಿಯಾಗಿದ್ದಾರೆ. ಹತ್ತು ಹಲವು ಕ್ರೀಯಾ ಯೋಜನೆಗಳನ್ನು ರೂಪಿಸಿದ್ದಾರೆ.