ಸಮರ ಸೇನಾನಿ ಗೀರೀಶ್ ಕೋಟೆ ಅವರ ಸಂಪಾದಕತ್ವದ ಕೃತಿಯಾಗಿದೆ. ಸಿದ್ಧರಾಮಯ್ಯನವರ ಅಭಿನಂದನಾ ಕೃತಿಯಿದು. "ಜನಪರ ನಿಲುವು, ಜನರ ಸಂಕ್ಷೇಮ ಕಾರ್ಯಕ್ರಮಗಳು ಜನರಿಗೆ ಪರಿಣಾಮಕಾರಿಯಾಗಿ ತಲುಪುವಂತೆ ಆಡಳಿತ ನಡೆಸುವುದು ಎಂಬುದರ ಆಧಾರದಲ್ಲಿ ಜನರ ಬೆಂಬಲ ಗಳಿಸುತ್ತೇವೆ ಎಂಬ ಗಟ್ಟಿ ನಂಬುಕೆ ರಾಜಕೀಯ ಪಕ್ಷಗಳಲ್ಲಿ ಕಡಿಮೆಯಾಗುತ್ತಿದೆ. ಎಷ್ಟು ಜನಪರವಾಗಿ ಸ್ಪಂದಿಸಿದರೂ, ಹಣ ಕೊಡದೆ ಜನರು ಮತ ಹಾಕುವುದು ಕಷ್ಟವಿದೆ ಎಂದು ಭಾವಿಸುವ ರಾಜಕೀಯ ಧುರೀಣರು ಹೆಚ್ಚಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರಂತಹ ನೇತಾರರು ಬೆರಳೆಣಿಕೆಯ ಸಂಖ್ಯೆಗೆ ಇಳಿಯುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಹಲವಾರು ಕಾರಣಗಳಿಂದ ಸಿದ್ದರಾಮಯ್ಯನವರು ಈಗಲೂ ಸಾಮಾನ್ಯ ಜನಸಮುದಾಯಗಳಿಗೆ ಆಶಾಕಿರಣದಂತಿದ್ದಾರೆ. ಅವರು ಗೆದ್ದುಬರಲಿ ಎಂದು ಹಾರೈಸುವವರು, ಅವರೇ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿ ಎಂದು ಆಶಿಸುವವರು ಸಿದ್ದರಾಮಯ್ಯನವರ ನಿಜವಾದ ಶಕ್ತಿಯಾಗಿದ್ದಾರೆ" ಎಂದು ಜಯಪ್ರಕಾಶ ಬಂಜಗೆರೆ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.