‘ಒಡನಾಡಿ ಸಬಿಹಾ’ ಕೃತಿಯು ಸಬಿಹಾ ಭೂಮಿಗೌಡ ಅವರ ಅಭಿನಂದನಾ ಹೊತ್ತಗೆ. ಲೇಖಕರಾದ ದು. ಸರಸ್ವತಿ, ಆರ್. ಸುನಂದಮ್ಮ, ಓಂಕಾರ ಗೌಡ ಕಾಕಡೆ ಹಾಗೂ ಎಚ್.ಎಸ್. ಅನುಪಮಾ ಅವರ ಸಂಪಾದಿತ ಕೃತಿ ಇದು. ಈ ಸಂಕಲನದಲ್ಲಿ ಮಹಿಳಾ ಚಳವಳಿ ನಡೆದು ಬಂದದಾರಿ, ಸಮಾನತೆಯೆಡೆಗೆ, ದಲಿತ, ಬಂಡಾಯ, ರೈತ ಚಳವಳಿ, ಮಾರ್ಕ್ಸ್ ವಾದ, ಭಾರತದಲ್ಲಿ ಚಳವಳಿಯಾಗಿ ಮಹಿಳಾ ಅಧ್ಯಯನ, ಕರ್ನಾಟಕ ಕೋಮು ಸೌಹಾರ್ದ ಚಳವಳಿ ಮತ್ತು ಪರಂಪರೆ ಸಾಹಿತ್ಯ ಮತ್ತು ಚಳವಳಿ ಹಾಗೂ ಶತಮಾನದ ಮಹಾ ಪಯಣಗಳು ಇಲ್ಲಿ ಸೇರಿಕೊಂಡಿವೆ. ಕಳೆದೆರಡು ದಶಕದ ಕನ್ನಡ ಮಹಿಳಾ ಸಾಹಿತ್ಯ ಹಾಗೂ ಸಬಿಹಾ ಸಾಹಿತ್ಯವಲೋಕನದ ಜೊತೆಗೆ ಒಡನಾಟಗಳ ಕುರಿತಾಗಿ ಈ ಕೃತಿಯಲ್ಲಿ 71ಲೇಖನಗಳಿವೆ. ಒಟ್ಟಿಗೆ 7ಅಧ್ಯಾಯಗಳಿದ್ದು ಇದೊಂದು ಸಂಗ್ರಹ ಯೋಗ್ಯ ಸಂಚಿಕೆ ಮಾತ್ರವಲ್ಲದೇ, ಕರ್ನಾಟಕ ಚಳವಳಿಗಳು ಹಾಗೂ ಎರಡು ದಶಕದ ಕನ್ನಡ ಮಹಿಳಾ ಸಾಹಿತ್ಯ ಕುರಿತಾಗಿ ಅಧ್ಯಯನಶೀಲರಿಗೆ ಉತ್ತಮ ಆಕರ ಗ್ರಂಥವಾಗಿದೆ.
©2024 Book Brahma Private Limited.