ನುಡಿರಂಜನ

Author : ಸಿಬಂತಿ ಪದ್ಮನಾಭ ಕೆ.ವಿ

Pages 337

₹ 250.00




Year of Publication: 2015
Published by: ಡಾ. ನಿರಂಜನ ವಾನಳ್ಳಿ ಅಭಿನಂದನ ಸಮಿತಿ
Address: ಪತ್ರಿಕೋದ್ಯಮ ವಿಭಾಗ, ಎಸ್.ಡಿ. ಎಂ. ಕಾಲೇಜು, ಉಜಿರೆ, ದಕ್ಷಿಣ ಕನ್ನಡ - 574240

Synopsys

‘ನುಡಿರಂಜನೆ’ ಡಾ.ನಿರಂಜನ ವಾನಳ್ಳಿ ಐವತ್ತನೇ ಜನ್ಮದಿನದ ಗೌರವ ಗ್ರಂಥ. ಈ ಗ್ರಂಥವನ್ನು ಲೇಖಕ ಸಿಬಂತಿ ಪದ್ಮನಾಭ ಅವರು ಸಂಪಾದಿಸಿದ್ದಾರೆ. ಪತ್ರಿಕೋದ್ಯಮದಲ್ಲೇ ತಮ್ಮ ವೃತ್ತಿ-ಪ್ರವೃತ್ತಿ, ಸಂತೋಷ-ಸಂತೃಪ್ತಿಗಳೆಲ್ಲವನ್ನೂ ಕಂಡುಕೊಂಡಿರುವ ಡಾ. ನಿರಂಜನ ವಾನಳ್ಳಿಯವರು, ಸಮೂಹ ಮಾಧ್ಯಮ ಹಾಗೂ ಸಂವಹನ ಪ್ರಾಧ್ಯಾಪಕರಾಗಿ ಶೈಕ್ಷಣಿಕವಾಗಿ ಗುರುತಿಸಿಕೊಂಡರೆ. ವಿಜಯ ಕರ್ನಾಟಕ ಉದಯವಾಣಿಗಳಂತಹ ದೈನಿಕಗಳಿಗೆ  ಅಂಕಣಕಾರರು. ಒಮಾನ್ ಎಂಬ ಒಗಟು ಪುಸ್ತಕ ರಚಿಸಿದ್ದಾರೆ. ಅದು ಅವರಿಗೆ ಹೆಸರು ತಂದುಕೊಟ್ಟ ಆವಾಸೀ ಕಥನವೂ ಹೌದು. ‘ಸುದ್ದಿಯಷ್ಟೇ ಅಲ್ಲ’ ಎಂಬ ತಮ್ಮ ಮೊದಲ ಕೃತಿಗೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದುಕೊಂಡಿದ್ದಾರೆ.

ಒಟ್ಟು 31 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸೋಡಿಗದ್ದೆ ಚೆಲುವೆಯರು, ಎರಡು ದಡಗಳ ನಡುವೆ, ಮೊಗೆದಷ್ಟೂ ನೆನಪುಗಳು, ಪ್ರೀತಿಗೆಷ್ಟು ಮುಖಗಳು, ಹುಡುಕಾಟದ ಹೊತ್ತು, ತುಡಿದ ಮನ, ಮಾಧ್ಯಮ ವ್ಯಾಯೋಗ, ಕಾಬಾಳೆ ಮತ್ತು ಪ್ರೀತಿ ಮುಂತಾದವು ಕೃತಿಗಳು. ರೈತ ವೈದ್ಯ ಕುಟುಂಬದಿಂದ ಬಂದಿದ್ದು, ತಮ್ಮ ಬೇರುಗಳನ್ನು ಮರೆಯದಿರುವುದು ಅವರ ಬದುಕು-ಬರಹಗಳಿಂದ ವ್ಯಕ್ತವಾಗುತ್ತದೆ. ಗೆಳೆಯರೆಲ್ಲ ಒಟ್ಟಾಗಿ. ಅರ್ಪಿಸಿದ ಗೌರವ ಗ್ರಂಥ -ನುಡಿರಂಜನ.

About the Author

ಸಿಬಂತಿ ಪದ್ಮನಾಭ ಕೆ.ವಿ

ಸಿಬಂತಿ ಪದ್ಮನಾಭ ಕೆ. ವಿ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದವರು. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಬಿಎ ವ್ಯಾಸಂಗ , ಆನಂತರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯೊಂದಿದ್ದು ಫೆಲೋಶಿಪ್‌ಗೆ ಆಯ್ಕೆಯಾಗಿ,  'ವಿಜಯ್ ಟೈಮ್' ಹಾಗೂ 'ಡೆಕ್ಕನ್ ಹೆರಾಲ್ಡ್' ದೈನಿಕಗಳಲ್ಲಿ ಪತ್ರಕರ್ತರಾಗಿದ್ದರು.   ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಘಟಕ ಸಂಸ್ಥೆ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕರಾಗಿದ್ದು, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಯಕ್ಷಗಾನ, ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. “ಪೊರೆ ಕಳಚಿದ ಮೇಲೆ', 'ತುಮಕೂರು ಜಿಲ್ಲೆಯ ...

READ MORE

Related Books