ಕಳೆದ ನಾಲ್ಕು ದಶಕಗಳಿಂದ ಕತೆ, ಕಾದಂಬರಿ ಕ್ಷೇತ್ರದಲ್ಲಿ ಗುರುತಿಸುತ್ತಾ ಬಂದವರು ಮಿತ್ರ ವೆಂಕಟ್ರಾಜ್. ಆರಂಭದಲ್ಲಿ ಕತೆಗಳ ಮೂಲಕ ಗಮನ ಸೆಳೆದ ಇವರು ಇದೀಗ ಮಿತ್ರಾ ವೆಂಕಟ್ರಾಜ್ ಅವರ ಸಮಗ್ರ ಸಾಹಿತ್ಯ ದರ್ಶನವನ್ನು ಮಾಡುವ ಪ್ರಯತ್ನಕ್ಕಿಳಿದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ, ಮುಂಬೈ, ಡಾ. ಜಿ. ಎನ್. ಉಪಾಧ್ಯ ಅವರು 'ಮಿತ್ರಾವಳಿ'ಯ ಬರಹಗಳ ಬಗೆಗೆ ಮಂಡಿಸಿದ ಬೇರೆ ಬೇರೆ ಅಭಿಪ್ರಾಯ, ವಿಮರ್ಶೆಗಳನ್ನು ಒಂದೆಡೆಗೆ ತಂದಿದ್ದಾರೆ. ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಪ್ರೊ. ಟಿ.ಪಿ. ಅಶೋಕ, ಪ್ರೊ. ಮಾಧವ ಕುಲಕರ್ಣಿ, ರಾಮಚಂದ್ರ ದೇವ, ಡಾ. ಜಿ. ಎಸ್. ಅಮೂರ, ಗಿರಡ್ಡಿ ಗೋವಿಂದರಾಜ, ವ್ಯಾಸರಾವ್ ನಿಂಜೂರ್, ತುಳಸಿ ವೇಣುಗೋಪಾಲ್, ಮುರಳೀಧರ ಉಪಾಧ್ಯ ಹಿರಿಯಡ್ಕ, ಡಾ. ನಾ. ಮೊಗಸಾಲೆ, ಸುನೀತಾ ಎಂ. ಶೆಟ್ಟಿ ಮೊದಲಾದವರು ಮಿತ್ರಾ ಅವರ ಸಾಹಿತ್ಯವನ್ನು ಬೇರೆ ಬೇರೆ ನೆಲೆಗಳಲ್ಲಿ ವಿಶ್ಲೇಶಿಸಿದ್ದಾರೆ. ಅಂತಹ ಸುಮಾರು 50ಕ್ಕೂ ಹೆಚ್ಚು ಬರಹಗಳು ಈ ಕೃತಿಯಲ್ಲಿವೆ.
©2024 Book Brahma Private Limited.