‘ಹೋರಾಟದ ಹೆಜ್ಜೆಗಳು’ ಕೃತಿಯು ಡಿ.ಎಸ್.ವೀರಯ್ಯ ಅವರ ಅಭಿನಂದನಾ ಗ್ರಂಥವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಸಾಹಿತಿ ಸುಮತೀಂದ್ರ ನಾಡಿಗ್ ಅವರು, ‘ನೀರೆಲ್ಲಾ ಹರಿದು ಹೋದನಂತರ ಹೊಳೆಯನ್ನು ದಾಟುತ್ತೇವೆಂದು ಕಾದು ಕುಳಿತಿರಬೇಡಿ’ ಎಂದು ಸ್ವಾಮಿ ವಿವೇಕಾನಂದರು ಹೇಳಿದರು. ಡಿ.ಎಸ್.ವೀರಯ್ಯನವರು ನಿರಕ್ಷರತೆಯ, ಬಡತನದ ಅಸಮಾನತೆಯ, ನಿರುದ್ಯೋಗದ ಮತ್ತು ಸಾಮಾಜಿಕ ಅನ್ಯಾಯದ ಹೊಳೆಯನ್ನು ದಾಟುವುದಕ್ಕೆ ಶಿಕ್ಷಣದ ಸಂಘಟನೆಯ ಮತ್ತು ಪ್ರೀತಿ ವಿಶ್ವಾಸದ ಸೇತುವೆಗಳನ್ನು ಕಟ್ಟುತ್ತಲೇ ಬಂದಿದ್ದಾರೆ. ಇಲ್ಲಿನ ಲೇಖನಗಳಲ್ಲಿ ವೀರಯ್ಯನವರ ವ್ಯಕ್ತಿ ಚಿತ್ರಗಳಿವೆ. ಹೋರಾಟದ ದಾಖಲೆಗಳಿವೆ ಮತ್ತು ವಿಚಾರಧಾರೆಗಳಿವೆ. ವೀರಯ್ಯನವರ ಮಾತಿಗಿಂತ ಹೆಚ್ಚಾಗಿ ದುಡಿಯುವುದನ್ನು ನಂಬುತ್ತಾರೆ. ಸಮಾಜದಲ್ಲಿ ಅಂಚಿಗೆ ನೂಕಿಸಿಕೊಂಡಿದ್ದರ ಬಗ್ಗೆ, ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ, ಒಳ್ಳೆಯ ಬದುಕಿನ ಕನಸು ಕಂಡಿದ್ದಾರೆ. ಬರೀ ಕನಸು ಕಾಣುತ್ತಿಲ್ಲ. ಡಾ.ಅಂಬೇಡ್ಕರ ಅವರ ವೈಚಾರಿಕತೆಯ ಮಾರ್ಗದರ್ಶನದಲ್ಲಿ ಜನರ ಜೊತೆಗೆ ನಿಂತು ಹೋರಾಡುತ್ತಿದ್ದಾರೆ. ಸಮಾಜದ ಎಲ್ಲ ಶೋಷಿತ ಜಾತಿ-ವರ್ಗಗಳ ಪ್ರತಿನಿಧಿಯಾಗಿರುವ ವೀರಯ್ಯನವರ ಬಗ್ಗೆ ಮತ್ತು ಅವರ ಕೆಲಸಗಳ ಬಗ್ಗೆ ನಾಡಿನ ಚಿಂತಕರ ಲೇಖನಗಳು ಈ ಸಂಗ್ರಹದಲ್ಲಿವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.