ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ ಕೌಟುಂಬಿಕ ಸಮಸ್ಯೆಗಳು

Author : ಪ್ರಧಾನ್ ಗುರುದತ್ತ

Pages 200

₹ 200.00




Year of Publication: 2013
Published by: ಸುಂದರ ಪ್ರಕಾಶನ
Address: ’ಚಿತ್ರಶ್ರೀ’ ಕಲಾಮಂದಿರ, ಅ.ನ.ಸು. ರಸ್ತೆ, ಹನುಮಂತನಗರ, ಬೆಂಗಳೂರು-560019.
Phone: 080656231165

Synopsys

’ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ ಕೌಟುಂಬಿಕ ಸಮಸ್ಯೆಗಳು’ ಕೃತಿಯು ಗೌರಿ ಸುಂದರ್ ಹಾಗೂ ಪ್ರಧಾನ್ ಗುರುದತ್ತ ಅವರ ಸಂಪಾದಿತ ಅಭಿನಂದನಾ ಗ್ರಂಥವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಪ್ರಧಾನ್ ಗುರುದತ್ತ ಅವರು, `ಭೈರಪ್ಪ ಅವರ ಕೃತಿಗಳನ್ನು ಕುರಿತಂತೆ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣಗಳು ನಡೆಯುತ್ತಲಿದ್ದು. ಸಂಶೋಧನಾತ್ಮಕ ಅಧ್ಯಯನಗಳು ಕೂಡಾ ಅದರ ಒಂದು ಭಾಗವಾಗಿದೆ. ಇಲ್ಲಿ ಭೈರಪ್ಪನವರ ಕಾದಂಬರಿಗಳ ಕುರಿತು ವಿಮರ್ಶೆಗಳನ್ನು ಮಾಡುವ ಲೇಖಕರು ಭೈರಪ್ಪರ ವ್ಯಕ್ತಿತ್ವದ ಕುರಿತು ಬಿಂಬಿಸಿದ್ದಾರೆ. ಕೀರ್ತಿಯನ್ನು ’ ಶನಿ’ ಎಂದೇ ಭಾವಿಸಿ , ಅದರ ಬೆನ್ನು ಹತ್ತಿ ಹೋಗದೆ ಇರುವ ಅಪೂರ್ವ ಸ್ವಭಾವದ ಲೇಖಕ ಭೈರಪ್ಪನವರಿಗೆ ಇವೆಲ್ಲಾ ಅವರ ಸಾಹಿತ್ಯ ಕಾರ್ಯದ ಮಹತ್ವದಿಂದಾಗಿ ಲಭಿಸಿರುವ ಗೌರವವಗಳು ಎಂದಿದ್ದಾರೆ. ಇಂಥ ಎಲ್ಲ ಸಂದರ್ಭಗಳಲ್ಲೂ ಅವರು ಮೆರೆಯುವ ನಿರ್ಲಿಪ್ತತೆ ಆಶ್ಚರ್ಯವನ್ನುಂಟು ಮಾಡುವಂಥದ್ದು, ಇವೆಲ್ಲವನ್ನೂ ಮೀರಿದ ’ ಕಾಲ’ ನಮ್ಮ ಸಾಧನೆಗೆ ನಿಜವಾದ ಬೆಲೆಯನ್ನು ಕಟ್ಟುತ್ತದೆ. ಅದೇ ನಿಜವಾದ ಪ್ರಶಸ್ತಿಯಾಗಿದ್ದು, ಕನ್ನಡದಲ್ಲಿ ಈ ರೀತಿಯ ನಿರ್ಲಿಪ್ತತೆಯನ್ನು ಮೆರೆದವರೆಂದರೆ ಅದು ನನಗೆ ತಿಳಿದಿರುವ ಮಟ್ಟಿಗೆ ಕುವೆಂಪು ಮತ್ತು ಶಿವರಾಮ ಕಾರಂತರು. ಭೈರಪ್ಪನವರೂ ಈ ಸಾಲಿಗೆ ಸೇರಿದವರು ಎಂದು ಹೇಳಬಹುದು. ಅವರ ಕುರಿತ ಬರವಣಿಗೆಗಳು ಮತ್ತಷ್ಟು ಸಾಹಿತ್ಯಾತ್ಮಕವಾದ ಅಭಿರುಚಿಯನ್ನು ಓದುಗರಿಗೆ ನೀಡುತ್ತದೆ ಎಂದಿದ್ದಾರೆ.

 

About the Author

ಪ್ರಧಾನ್ ಗುರುದತ್ತ
(30 May 1938)

ಲೇಖಕ, ಅನುವಾದಕ ಪ್ರಧಾನ್ ಗುರುದತ್‌ ಅವರು ಹುಟ್ಟಿದ್ದು 30-05-1938ರಂದು ಚಿಕ್ಕಬಳ್ಳಾಪುರದಲ್ಲಿ.  ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಕನ್ನಡದಲ್ಲಿ ಎಂ.ಎ.ಆನರ್ಸ್, ಅನುವಾದದಲ್ಲಿ ಎಂ.ಎ., ಜೊತೆಗೆ ಪ್ರೊ.ವೆಂಕಟರಾಮಪ್ಪನವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ. ಪಿಎಚ್.ಡಿ ವಿಷಯವಾಗಿ ಕೃಷ್ಣ ಕಥೆಯ ಉಗಮ ಮತ್ತು ವಿಕಾಸ. ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ. ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದಾರೆ. ಬಹುಮುಖ ಪ್ರತಿಭೆ, ಅಪರೂಪದ ಪ್ರಾಧ್ಯಾಪಕರು, ಬಹುಭಾಷಾಪಂಡಿತರು ಆಗಿರುವ ಪ್ರಧಾನ್ ಗುರುದತ್ತರು 150ಕ್ಕೂ ಮಿಗಿಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸುಮಾರು ...

READ MORE

Related Books