ಅಮ್ಮಾ ಎಂದರೆ ಮಕ್ಕಳ ಕವನಸಂಕಲನವನ್ನು ಗುರುರಾಜ್ ಬೆಣಕಲ್ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ ಶಕ್ತಿಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು. ಬೆಳೆಯುವ ಮಗು ಸುತ್ತಲಿನ ಜಗತನ್ನು ಖುಷಿಯಾಗಿ ಪರಿಚಯ ಮಾಡಿಕೊಳ್ಳುವ ಸಾಧನಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು. ತನ್ನ ತಂದೆ, ತಾಯಿ, ಹತ್ತಿರದವರು, ಪ್ರಾಣಿಗಳು, ಸೂರ್ಯ, ಚಂದ್ರ, ನಕ್ಷತ್ರ, ಹೂವು ಭಾಷೆ, ಎಲ್ಲ ಈ ಸಾಹಿತ್ಯದಿಂದ ಹತ್ತಿರರಾಗುತ್ತಾರೆ. ಸಂತೋಷದ ಮೂಲಕ ಮಗುವಿನ ಮನಸ್ಸನ್ನು ಅರಳಿಸುವ ಸಾಹಿತ್ಯವು ಮಗುವಿನ ವಯಸ್ಸು, ಕಲ್ಪನೆ, ಕಲಿಯುವ ರೀತಿ, ಖುಷಿಪಡುವ ರೀತಿ ಎಲ್ಲಕ್ಕೆ ಹೊಂದಿಕೊಳ್ಳಬೇಕು. ಆದುದರಿಂದಲೇ ಮಕ್ಕಳ ಸಾಹಿತ್ಯವು ಸಾಹಿತ್ಯದ ಒಂದು ವಿಶಿಷ್ಟ ರೂಪವಾಗಿದೆ. ಇಂತಹ ಸಾಹಿತ್ಯದ ಸಮರ್ಥ, ಸೊಗಸಾದ ಕೃತಿ ಇಲ್ಲಿದೆ ಎಂದು ಈ ಪುಸ್ತಕದ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
©2024 Book Brahma Private Limited.