ಅಜ್ಜಿ ಅಂದ್ರ ಹೆಂಗಿರ್ತಾಳ

Author : ವಿನಾಯಕ ರಾ. ಕಮತದ

Pages 96

₹ 100.00




Year of Publication: 2021
Published by: ಸುಭಾಷಿಣಿ ಪ್ರಕಾಶನ
Address: ಡಾ.ಎಸ್. ರಾಧಾಕೃಷ್ಣನ್ ನಗರ ಎಲ್.ಐ.ಜಿ.127,ಅಜ್ಜ ಅಜ್ಜಿ ಮನೆ, ಜಿಲ್ಲಾ ಆಸ್ಪತ್ರೆ ರಸ್ತೆ, ಗದಗ, 582103
Phone: 9742685284

Synopsys

ಮಕ್ಕಳ ಸಾಹಿತಿ ವಿನಾಯಕ ರಾ. ಕಮತದ ಅವರ ಮಕ್ಕಳ ಪದ್ಯದ ಸಂಕಲನ ‘ಅಜ್ಜಿ ಅಂದ್ರ ಹೆಂಗಿರ್ತಾಳ’. ಈ ಸಂಕಲನದಲ್ಲಿ ಸಾಹಿತಿ ಆನಂದ ಪಾಟೀಲ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಚುಕ್ಕಿ ಇಟ್ಟೋರ ಯಾರು..?, ಅಜ್ಜಿ ಅಂದ್ರ ಹೆಂಗಿರ್ತಾಳ ?, ಹದ್ದಿನ ಕಣ್ಣಿನ ಹನುಮಂತ, ಒಂದೇ ಕುಳಿತು, ಚಿಕ್ಕ ಗುಬ್ಬಿ, ಗಾಳಿ, ಏರಿ ಮ್ಯಾಲ ಎತ್ತು, ಗೊಮ್ಮಟೇಶ, ಕುನ್ನಿ, ಚಂದಪ್ಪ, ಸೊಳ್ಳೆ, ದೀಪಾವಳಿ, ಕಾರ್ಮೋಡ ಸೇರಿದಂತೆ 72 ಶೀರ್ಷಿಕೆಗಳು ಮಕ್ಕಳ ಕವನಗಳು ಸಂಕಲನದಲ್ಲಿದೆ.

About the Author

ವಿನಾಯಕ ರಾ. ಕಮತದ
(29 September 1980)

ಡಾ. ವಿನಾಯಕ ರಾ. ಕಮತದ ಕವಿ, ನಾಟಕಕಾರ ಹಾಗೂ ಕಲಾವಿದರು. ಹುಟ್ಟದ್ದು 1980 ಸಪ್ಟೆಂಬರ್‌ 29ರಂದು ಗದಗ ಜಿಲ್ಲೆ ಗದಗ ತಾಲ್ಲೂಕಿನ ಬೆಂತೂರಿನಲ್ಲಿ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲ ಎಂ.ಇಡಿ. ಪದವಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮತ್ತು ಡಾ. ಎಸ್. ಎನ್ ವೆಂಕಟಾಪೂರ ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ "ಕನ್ನಡ ಗಜಲ್‌ಗಳಲ್ಲಿ ವಸ್ತು ಮತ್ತು ಅಭಿವ್ಯಕ್ತಿ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪದವಿ ಗಳಿಸಿದ್ದಾರೆ. 2005 ರಿಂದ 2017 ವರೆಗೆ ತೋಂಟದಾರ್ಯ ವಿದ್ಯಾಪೀಠದ ಬಿ.ಇಡಿ.ಮತ್ತು ಡಿ.ಇಡಿ. ಕಾಲೇಜುಗಳ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ನಂತರ ...

READ MORE

Related Books