ಆರೋಗ್ಯದಿಂದಿರಲು ನಾವು ಪಾಲಿಸಬೇಕಾದ ನಿಯಮಗಳೆನು, ನಮ್ಮ ದೇಹದ ಮುಖ್ಯವಾದ ಆಂಗಗಳ ಆರೈಕೆ ಹೇಗಿರಬೇಕು, ಆಡುಗೆ ಮನೆಯಂಬ ಅಧ್ಬುತ ಔಷಧಾಲಯ, ನೀರಿನ ಪ್ರಾಮುಖ್ಯತೆ, ನಡಿಗೆ ಇಂದ ಇರುವ ಕೊಡುಗೆ ಮುಂತಾದ ವಿಷಯಗಳ ಬಗ್ಗೆ ಬರೆದ ಅಂಕಣ ಬರಹಗಳ ೫೦ಕ್ಕೂ ಹೆಚ್ಚು ಉಪಯುಕ್ತ ಲೇಖನ ಗಳ ಸಂಗ್ರಹ ಈ ಪುಸ್ತಕದಲ್ಲಿದೆ. "ಈ ಪುಸ್ತಕದಲ್ಲಿರುವ ಬಹುಪಾಲು ಲೇಖನಗಳು ಸಮಾಜಪರವಾದದ್ದು, ಶ್ರೀಸಾಮನ್ಯನ ತಿಳುವಳಿಕೆಯನ್ನು ಹೆಚ್ಚಿಸುವಂತಹದ್ದು. ಅವನ ಬಾಳನ್ನು ಆರೋಗ್ಯಕರವಾಗಿಸಬಲ್ಲಂತಹದ್ದು, ವಿಲನ್ ವೈಟ್ ಬ್ರೆಡ್-ಬೇಡ ಬಿಳಿಬ್ರೆಡ್ ಸಂಗ, ಸಿಹಿ ವಿಷ, ಸಕ್ಕರೆ ಮೇಲೆ ಬೇಡ ಅಕ್ಕರೆ, ಮೈದಾ ಎಂಬ ಮೆದು ವಿಷ, ಆಹಾರದ ಬಣ್ಣಗಳು-ತರುವವು ರೋಗಗಳು, ಅಡುಗೆ ಮನೆಯೆಂಬ ಔಷಧಾಲಯ, ಅಪಾಯಕಾರಿ ನೈಲ್ ಪಾಲಿಷ್ ರಿಮೂವರ್ ಮುಂತಾದ ಶಿರ್ಷಿಕೆಗಳೇ ಉದಾಹರಣೆಗಳು. ನಿಮ್ಮ ಆರೋಗ್ಯವನ್ನು ಮಾಡುವಂತಹ ಹವ್ಯಾಸಗಳಿಗೆ ನೀವು ಬಲಿಯಾಗುತ್ತಿದ್ದರೆ ಅದನ್ನು ಎಚ್ಚರಿಸುವುದು ನಮ್ಮ ಧರ್ಮ ಮಾತ್ರವಲ್ಲ, ಕತ್ರವ್ಯವೂ ಆಗಿರುತ್ತದೆ. ಹಾಗಾಗಿ ಪ್ರಕಾಶ್ ರವರು ಇಂಥಹ ಉಪಯುಕ್ತ ಲೇಖನಗಳನ್ನು ಬರೆಯುತ್ತಿದ್ದಾರೆ. ಆಯುರಾರೋಗ್ಯ ಎನ್ನುವ ಈ ಪುಸ್ತಕವು ಉಪಯುಕ್ತವಾಗಿದೆ.
ಡಾ. ನಾ ಸೋಮೇಶ್ವರ್ (ಮುನ್ನುಡಿಯಿಂದ)
©2024 Book Brahma Private Limited.