ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ನಮ್ಮ ಆರೋಗ್ಯಕರ ಜೀವನಕ್ಕೆ ಹತ್ತು ಹಲವು ಹೊಳವುಗಳನ್ನು ನೀಡುತ್ತದೆ. ಈ ಕುರಿತು ಲೇಖಕ ಟಿ.ಎಲ್. ನಂಜುಂಡಯ್ಯ ಅವರು ಬರೆದ ಕೃತಿ-ನಮ್ಮ ಆಹಾರವೇ ನಮಗೆ ಔಷಧ. ಋತುಮಾನಕ್ಕನುಸರಿಸಿ, ಯಾವ ಯಾವ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಜ್ಞಾನವು ಎಲ್ಲ ಬಗೆಯ ರೋಗಗಳನ್ನು ದೂರವಿರಿಸುತ್ತದೆ. ಬಹುತೇಕ ರೋಗಗಳು ನಾವು ಬಳಸುವ ಆಹಾರದ ಸ್ವಭಾವ ಹಾಗೂ ಪ್ರಮಾಣಗಳನ್ನು ಅವಲಂಬಿಸಿರುತ್ತದೆ. ಇಂತಹ ಜ್ಞಾನದ ಮಾಹಿತಿ ಇರುವ ಕೃತಿ ಇದು. ಎಲ್ಲ ಸಂಪತ್ತಿಗಿಂತಲೂ ದೊಡ್ಡದು ಎಂದೇ ಹೇಳಲಾಗುವ ಆರೋಗ್ಯ ಸಂಪತ್ತನ್ನು ನಮ್ಮ ನಿಯಮತ ಆಹಾರ ಪದ್ಧತಿ ಮೂಲಕ ಕಾಯ್ದುಕೊಳ್ಳಬೇಕು ಎಂಬ ಎಚ್ಚರವನ್ನು ಈ ಕೃತಿ ನೀಡುತ್ತದೆ.
©2024 Book Brahma Private Limited.