`ಆಯುರ್ವೇದೀಯ ಆಹಾರ ಕ್ರಮ' ಎಂಬುದು ಆರೋಗ್ಯ ಲೇಖನಗಳ ಸಂಗ್ರಹ ಕೃತಿ. ವಿವಿಧ ಲೇಖಕರು ಬರೆದಿದ್ದಾರೆ. ಆಯುರ್ವೆದಿಕ್ ಪದ್ದತಿಯ ಬಗೆಗಿನ ಮಾಹಿತಿಯನ್ನು ಒಳಗೊಂಡಿದೆ. ಆರೊಗ್ಯರಕ್ಷಣೆಗೆ ಆಹಾರದ ಬಗೆಗೆ ತಿಳಿವಳಿಕೆ ಮತ್ತು ಶಿಸ್ತು ಅತ್ಯಗತ್ಯ. ನಮ್ಮ ಪೂರ್ವಿಕರು ಆಹಾರ ನಿಯಮಗಳನ್ನು ಪಾಲಿಸಿ ದೀರ್ಘಾಯುಷ್ಯವನ್ನು ಪಡೆದು ನಿರೋಗಿಗಳಾಗಿ ಸಾರ್ಥಕ ಜೀವನವನ್ನು ನಡೆಸುತ್ತಿದ್ದರು. ಆಯುರ್ವೇದ ಗ್ರಂಥಗಳಲ್ಲಿನ ಮೂಲ ಗ್ರಂಥಗಳಿಂದ ಅನೇಕ ಉಪಯುಕ್ತ ವಿಷಯಗಳನ್ನು ಸಂಗ್ರಹಿಸಿ, ಲೇಖನಗಳ ಮೂಲಕ ಈ ಪುಸ್ತಕದಲ್ಲಿ ನೀಡಲಾಗಿದೆ. ಈ ಆಯುರ್ವೇದೀಯ ಆಹಾರ ನಿಯಮಗಳು ಇಂದಿನ ಕಾಲಕ್ಕೂ ಸರಿಹೊಂದುವುದು ಮತ್ತು ಆರೋಗ್ಯ ಪಾಲನೆಯನ್ನು ಬಯಸುವವರಿಗೆ ದಾರಿದೀಪವಾಗುತ್ತವೆ ಎಂದು ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
©2025 Book Brahma Private Limited.