ಲೇಖಕಿ ಡಾ. ಅನುರಾಧಾ ಕಾಮತ್ ಅವರ ಕೃತಿ-ಆಹಾರ ಸಂಹಿತೆ. ಲೇಖಕಿಯು ಈ ಕೃತಿಗೆ ಸಂಹಿತೆ ಎಂದು ಕರೆದಿದ್ದು ಬಹಳ ಅರ್ಥಗರ್ಭಿತ. ಏಕೆಂದರೆ, ಆಹಾರ ಸೇವನೆಯು ಒಂದು ಕಲೆ, ಅದು ವಿಜ್ಞಾನವೂ ಹೌದು. ಮತ್ತು, ಎಲ್ಲರೂ ಪಾಲಿಸಲೇ ಬೇಕಾದ ಸಂಹಿತೆಯೂ ಹೌದು. ತಪ್ಪಿದರೆ, ಎಲ್ಲರೂ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ ಎಂಬುದು ಲೇಖಕಿಯ ಕಳಕಳಿ. ಯಾವ ರೀತಿಯ (ಕಾಳು, ತರಕಾರಿ ಇತ್ಯಾದಿ) ಆಹಾರ ಪದಾರ್ಥವನ್ನು ಹೇಗೆ ಬಳಸಬೇಕು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬ ಜ್ಞಾನ ಅಗತ್ಯ. ಏಕೆಂದರೆ, ಅವು ದೇಹದ ಸ್ವಭಾವಕ್ಕೆ ಅನುಗುಣವಾಗಿ ಉಂಟು ಮಾಡುವ ಪರಿಣಾಮಗಳ ಹಿನ್ನೆಲೆಯಲ್ಲಿ ಅವುಗಳ ಸೇವನೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಈ ಎಲ್ಲದರ ಜ್ಞಾನವನ್ನು ವೈಜ್ಞಾನಿಕವಾಗಿ ನೀಡುವ ಈ ಕೃತಿಯು ವ್ಯಕ್ತಿಗತ ಹಾಗೂ ಸಾರ್ವಜನಿಕ ಆರೋಗ್ಯದ ಕಳಕಳಿಯನ್ನು ತೋರುತ್ತದೆ.
©2025 Book Brahma Private Limited.